ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಿನಲ್ಲಿ ವಿದ್ಯಾರ್ಥಿಯ ಕಿಡ್ನಾಪ್, ಹಲ್ಲೆ; 9 ಮಂದಿಯ ವಿರುದ್ದ FIR – News Kadaba

ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಿನಲ್ಲಿ ವಿದ್ಯಾರ್ಥಿಯ ಕಿಡ್ನಾಪ್, ಹಲ್ಲೆ; 9 ಮಂದಿಯ ವಿರುದ್ದ FIR

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 19. ನಾವು ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರು ಎಂದು ಹೇಳಿಕೊಂಡು ವಿದ್ಯಾರ್ಥಿಯೋರ್ವನನ್ನು ಕಿಡ್ನಾಪ್ ಮಾಡಿ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯ ವಿರುದ್ದ ಕೆಂಗೇರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

 

ಖಾಸಗಿ ಕಾಲೇಜೊಂದರಲ್ಲಿ ಬಿಬಿಎ ಓದುತ್ತಿರುವ ಜೀವನ್‌ ಜೈನ್‌ ಎಂಬಾತ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಇವೆಂಟ್ ವಿಚಾರವಾಗಿ ಮೂರು ಲಕ್ಷ ಸಾಲ ಪಡೆದಿದ್ದ. ಆದರೆ ಕಾರಣಾಂತರಗಳಿಂದಾಗಿ ಜೀವನ್ ಗೆ ಹೇಳಿದ ಸಮಯಕ್ಕೆ ಹಣ ನೀಡಲು ಆಗಿರಲಿಲ್ಲ ತಡವಾಗಿ ಸಾಲ ತೀರಿಸಿದ್ದ. ಆದರೆ ಕಿಡಿಗೇಡಿಗಳು ಸಾಲ ತೀರಿಸಿದರೂ ಆತನನ್ನು ಬಿಡದೆ ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪಿಸಲಾಗಿದೆ. ಲೇಟಾಗಿ ಹಣ ಕೊಟ್ಟಿದ್ದಕ್ಕೆ ಕಿಡ್ನಾಪ್ ಮಾಡಿದ ಆರೋಪಿಗಳು ನಾವು ನಲಪಾಡ್ ಹುಡುಗರು, ಹತ್ತು ಲಕ್ಷ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಆರು ಲಕ್ಷ ರೂಪಾಯಿ ಹಾಕಿಸಿಕೊಂಡಿದ್ದಲ್ಲದೇ ಹತ್ತು ಲಕ್ಷದವರೆಗೆ ಕೊಡಬೇಕು ಎಂದು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿಯು ಪೊಲೀಸ್‌ ಕಮಿಷನರ್‌ಗೆ ಮೇಲ್ ಮಾಡಿ ದೂರು ನೀಡಿದ್ದಾನೆ. ಸದ್ಯ ದೂರಿನಲ್ಲಿ ಒಂಬತ್ತು ಜನರ ವಿರುದ್ಧ ಕಿಡ್ನಾಪ್ ಹಾಗೂ ಸುಲಿಗೆ ಮಾಡಿರೋ ಆರೋಪ ಮಾಡಿ ಯುವಕ ದೂರು ನೀಡಿದ್ದಾನೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ

Scroll to Top