ದೇರಳಕಟ್ಟೆ ಜಿಲ್ಲಾ ಮುಖ್ಯರಸ್ತೆ – ಮಾರ್ಗ ಬದಲಾವಣೆ ವಾಹನಗಳ ಸಂಚಾರ ನಿರ್ಬಂಧ

(ನ್ಯೂಸ್ ಕಡಬ) newskadaba.com  ಮಂಗಳೂರು,ಆ. 15. ಮಂಗಳೂರು ತಾಲೂಕು, ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ, ಲೋಕೋಪಯೋಗಿ ಇಲಾಖೆಯ ದೇರಳಕಟ್ಟೆ ಬರುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ (ಕಾನಕೆರೆ – ರೆಂಜಾಡಿ) ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮುಂದಿನ ಆದೇಶದವರೆಗೆ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ದೇರಳಕಟ್ಟೆ – ಬರುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಈ ಕೆಳಗಿನಂತೆ ರಸ್ತೆಗಳನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ.

Also Read  ಬೆಳ್ತಂಗಡಿ: ಮಾತೃ ಪಕ್ಷದ 'ಕೈ' ಹಿಡಿದ ಬಿಜೆಪಿ ಮುಖಂಡ ► ಕಾಂಗ್ರೆಸ್ ಸೇರಿದ ಮರು ಕ್ಷಣವೇ ಸ್ಪೋಟಕ ಮಾಹಿತಿ ನೀಡಿದ ಗಂಗಾಧರ ಗೌಡ

ರೆಂಜಾಡಿ ಕಡೆಯಿಂದ ಕಾನಕರೆ, ದೇರಳಕಟ್ಟೆ ಕಡೆಗೆ ಸಂಚರಿಸುವ ವಾಹನಗಳು: ಸಮೀಪದ ಮಸೀದಿ ಮೂಲಕ ಕಾಂಕ್ರೀಟ್ ರಸ್ತೆಯಲ್ಲಿ ವಾಹನಗಳು ದೇರಳಕಟ್ಟೆ ಜಂಕ್ಷನ್ ಸಂಚರಿಸುವುದು.
ದೇರಳಕಟ್ಟೆ ಕಡೆಯಿಂದ ಕಾನಕೆರೆ ಕಡೆಗೆ ಸಂಚರಿಸುವ ವಾಹನಗಳು: ಮಾಣಿ – ಉಳ್ಳಾಲ ರಾಜ್ಯ ಹೆದ್ದಾರಿ – 300 ರ ದೇರಳಕಟ್ಟೆ ಜಂಕ್ಷನ್‍ನಲ್ಲಿರುವ ಮೀಟಿಂಗ್ ಪಾಯಿಂಟ್ ಹೋಟೆಲ್‍ನ ಎದುರು ಭಾಗದ ರಸ್ತೆಯಲ್ಲಿ ಕಾನಕೆರೆ ಕಡೆಗೆ ಸಂಚರಿಸಲು ಸೂಚಿಸಿದ್ದಾರೆ.

error: Content is protected !!
Scroll to Top