ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪರಾರಿ – ಉಳಾಯಿಬೆಟ್ಟು – ಮಲ್ಲೂರು ರಸ್ತೆ ದುಸ್ಥಿತಿ; ಘನ ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧ – News Kadaba

ಪರಾರಿ – ಉಳಾಯಿಬೆಟ್ಟು – ಮಲ್ಲೂರು ರಸ್ತೆ ದುಸ್ಥಿತಿ; ಘನ ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧ

(ನ್ಯೂಸ್ ಕಡಬ) newskadaba.com  ಮಂಗಳೂರು,ಆ. 15. ಮಂಗಳೂರು ತಾಲೂಕಿನ ಪರಾರಿ – ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯ 0.95 ಕಿ.ಮೀ. ರಲ್ಲಿ ಸೇತುವೆ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
 

ಪರಾರಿ – ಉಳಾಯಿಬೆಟ್ಟು ಸೇತುವೆಯ ಮೂಲಕ ಪರಾರಿ – ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ. ಮಲ್ಲೂರು ಕಡೆಯಿಂದ ವಾಮಂಜೂರು (ರಾ.ಹೆ-169)/ಮಂಗಳೂರು ಕಡೆಗೆ ಸಂಚರಿಸುವ ಘನವಾಹನಗಳು: ವಾಮಂಜೂರು – ಪೆರ್ಮಂಕಿಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕೆತ್ತಿಕ್ಕಲ್ ಎಂಬಲ್ಲಿ ಅಥವಾ ಬೈತುರ್ಲಿ – ನೀರುಮಾರ್ಗ- ಕಲ್ಪನೆ ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಬೈತುರ್ಲಿ ಎಂಬಲ್ಲಿ ಮಂಗಳೂರು – ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ – 169 ನ್ನು ಸಂಪರ್ಕಿಸಿ, ವಾಮಂಜೂರು (ರಾ.ಹೆ – 169)/ಮಂಗಳೂರಿಗೆ ಸಂಚರಿಸುವುದು.
ವಾಮಂಜೂರು (ರಾ.ಹೆ-169)/ ಮಂಗಳೂರು ಕಡೆಯಿಂದ ಮಲ್ಲೂರು ಕಡೆಗೆ ಸಂಚರಿಸುವ ಘನವಾಹನಗಳು: ಮಂಗಳೂರು – ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169ರ ಕೆತ್ತಿಕ್ಕಲ್ ಎಂಬಲ್ಲಿ ವಾಮಂಜೂರು – ಪೆರ್ಮಂಕಿಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಅಥವಾ ಮಂಗಳೂರು – ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169ರ ಬೈತುರ್ಲಿ ಎಂಬಲ್ಲಿ ಬೈತುರ್ಲಿ – ನೀರುಮಾರ್ಗ- ಕಲ್ಪನೆ ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಸಂಚರಿಸಿ, ಪೆರ್ಮಂಕಿಪದವು ಎಂಬಲ್ಲಿ ಪರಾರಿ – ಉಳಾಯಿಬೆಟ್ಟು – ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸಿ ಮಲ್ಲೂರುಗೆ ಸಂಚರಿಸುವಂತೆ ತಿಳಿಸಿದ್ದಾರೆ.

Scroll to Top