ಮಗನಿಂದ ತಂದೆಯ ಬರ್ಬರ ಕೊಲೆ ►ಅರ್ಧ ಗಂಟೆ ತಂದೆಯನ್ನು ಕೊಚ್ಚಿದ ಮಗ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.28. ಕುಡಿದ ಮತ್ತಿನಲ್ಲಿದ್ದ ಮಗನೋರ್ವ ತನ್ನ ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಚಿಕ್ಕಮಗಳೂರಿನ ಮೈಲಿ ಮನೆ ಎಂಬಲ್ಲಿ ಬುಧವಾರದಂದು ನಡೆದಿದೆ.

ಮೈಲಿ ಮನೆ ನಿವಾಸಿ ಕೃಷ್ಣ (60) ಎಂಬವರೇ ತನ್ನ ಮಗನಿಂದಲೇ ಕೊಲೆಯಾದ ನತದೃಷ್ಟ. ಮಗ ನಾಗ (35) ಎಂಬಾತ ಕುಡಿದ ಮತ್ತಿನಲ್ಲಿ ತನ್ನ ತಂದೆಯನ್ನು ೫೦ ಮೀಟರ್ ಅಟ್ಟಾಡಿಸಿಕೊಂಡು ಬಂದು ಅರ್ಧಗಂಟೆಗೂ ಹೆಚ್ಚು ಕಾಲ ತಂದೆಯ ದೇಹವನ್ನು ಕೊಚ್ಚಿದ್ದು, ಬರ್ಬರವಾಗಿ ಕೊಲೆಗೈದಿದ್ದಾನೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ನಾಗನನ್ನು ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ.

error: Content is protected !!
Scroll to Top