ಬೈಕ್ ಗೆ ಕಸದ ಲಾರಿ ಡಿಕ್ಕಿ ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.29.   ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ ಹಾಗೂ ದ್ಬಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ, ವಾಹನ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಕೆ.ಆರ್ ಸರ್ಕಲ್ ಬಳಿ ನಡೆದಿದೆ.

ಮೃತರನ್ನ ಪ್ರಶಾಂತ್‌ (25), ಬಯ್ಯಣ್ಣಗಿರಿ ಶಿಲ್ಪ ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಿವಾಸಿಯಾಗಿರುವ ಪ್ರಶಾಂತ್‌, ಶಿಲ್ಪಾ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಮೆಜೆಸ್ಟಿಕ್‌ನಿಂದ ಕೆ.ಆರ್‌ ಸರ್ಕಲ್‌ ಮಾರ್ಗವಾಗಿ ಬೈಕ್‌ ನಲ್ಲಿ ಬರುತ್ತಿದ್ದರು. ಇದೇ ವೇಳೆ ಸಿಐಡಿ ಸಿಗ್ನಲ್‌ ಮಾರ್ಗದಿಂದ ಕೆ.ಆರ್‌ ವೃತ್ತದ ಮಾರ್ಗವಾಗಿ ಬಿಬಿಎಂಪಿ ಕಸದ ಲಾರಿ ವೇಗವಾಗಿ ಬರುತ್ತಿತ್ತು. ತಿರುವಿನ ಮಾರ್ಗದಲ್ಲೂ ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

Scroll to Top