ಮರ ಉರುಳಿ ಬಿದ್ದು ರಿಕ್ಷಾ ಜಖಂ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕಾರ್ಕಳ, ಜು.23. ಮಾವಿನ ಮರವೊಂದು ಧರೆಗುರುಳಿದ  ಪರಿಣಾಮ ರಿಕ್ಷಾ ಸಂಪೂರ್ಣ ಹಾನಿಗೊಳಗಾಗಿದ್ದರೂ ಚಾಲಕ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಭಾರೀ ಮಳೆಗೆ ಮರವೊಂದು ಉರುಳಿ ಬಿದ್ದ ಘಟನೆ ಕಾರ್ಕಳ ವಿಸ್ತೃತ ಬಸ್ ನಿಲ್ದಾಣದ ಪರಿಸರದಲ್ಲಿ ಸಂಭವಿಸಿದೆ. ಸಂಜೆ 4ರ ವೇಳೆಗೆ ಈ ಘಟನೆಯಲ್ಲಿ ರಿಕ್ಷಾವೊಂದು ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

Scroll to Top