ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್

(ನ್ಯೂಸ್ ಕಡಬ) newskadaba.com ಕಡಬ, ಫೆ.15. ಬಹು ನಿರೀಕ್ಷಿತ ‘ಕಾಯಂಕುಳಂ ಕೊಚ್ಚುನ್ನಿ’ ಚಿತ್ರದಲ್ಲಿ ನಟಿಸಲು ಕಡಬ ತಾಲೂಕಿಗೆ ಆಗಮಿಸಿರುವ ಕೇರಳದ ಸಿನಿಮಾ ಸೂಪರ್ ಸ್ಟಾರ್ ಮೋಹನ್ ಲಾಲ್ ಗುರುವಾರದಂದು ದಕ್ಷಿಣ ಭಾರತದ ಪ್ರಮುಖ ದೇವಸ್ಥಾನ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಗುರುವಾರ ಬೆಳಿಗ್ಗೆ ತಾನು ವಾಸ್ತವ್ಯವಿರುವ ಸುಬ್ರಹ್ಮಣ್ಯದ ಲಾಡ್ಜ್ ನಿಂದ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ ಮೋಹನ್ ಲಾಲ್, ನಂತರ ಕಡಬ ತಾಲೂಕಿನ ಬಲ್ಯದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೆರಳಿದರು. ರೋಷನ್ ಆಂಡ್ರೋಸ್ ನಿರ್ದೇಶನದಲ್ಲಿ ಮಲೆಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಯಂಕುಳಂ ಕೊಚ್ಚುನ್ನಿ’ ಚಿತ್ರದಲ್ಲಿ ನಾಯಕನಾಗಿ ನಿವಿನ್ ಪೋಲಿ, ನಾಯಕಿಯಾಗಿ ಪ್ರಿಯಾ ಆನಂದ್ ಹಾಗೂ ಅತಿಥಿ ನಟನಾಗಿ ಮೋಹನ್ ಲಾಲ್ ನಟಿಸುತ್ತಿದ್ದಾರೆ.

Also Read  ಓವರ್‌ಟೇಕ್ ಭರದಲ್ಲಿ ಬೈಕ್ ಗಳ‌ ನಡುವೆ ಮುಖಾಮುಖಿ ಢಿಕ್ಕಿ ➤ ರಸ್ತೆಗೆಸೆಯಲ್ಪಟ್ಟ ಯುವಕ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top