ಮಾಣಿ: ಬೈಕಿಗೆ ಢಿಕ್ಕಿ ಹೊಡೆದು ಸಿನಿಮೀಯ ಶೈಲಿಯಲ್ಲಿ ಪಲ್ಟಿಯಾದ ಕಾರು ► ಬೈಕ್ ಸವಾರ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.15. ಮಾಣಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮಾಣಿ ಸಮೀಪದ ಹಳೀರ ಎಂಬಲ್ಲಿ ಸಿನಿಮೀಯ ಶೈಲಿಯಲ್ಲಿ ಬೈಕಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಗುರುವಾರದಂದು ನಡೆದಿದೆ.

ಮಾಣಿಯಿಂದ ಮಂಗಳೂರಿನ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಇಳಿದಿದ್ದು, ರಸ್ತೆಯಲ್ಲಿ ಪಲ್ಟಿ ಹೊಡೆದು ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರು ಉಲ್ಟಾ ಬಿದ್ದಿದ್ದು, ಕಾರಿನಲ್ಲಿದ್ದ ಕ್ಯಾನುಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

Also Read  ’ಮಿಸ್‌ ಮಂಗಳೂರು’ ಪಟ್ಟ ಕಾಫಿನಾಡಿನ ಚೆಲುವೆ ಸುಶ್ಮಾ ಎಸ್‌. ಶೆಟ್ಟಿ ಪಾಲು !!

error: Content is protected !!
Scroll to Top