ಪೇಟಿಎಂ ಅಧ್ಯಕ್ಷ ಸ್ಥಾನ ತೊರೆದ ವಿಜಯ್ ಶೇಖರ್ ಶರ್ಮಾ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 27. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ ನ ಅರೆಕಾಲಿಕ ನಾನ್ ಎಕ್ಸಿಕ್ಯೂಟಿವ್ ಅಧ್ಯಕ್ಷರಾಗಿದ್ದ ವಿಜಯ್ ಶೇಖರ್ ಶರ್ಮಾ ಅವರು ತನ್ನ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಮಾರ್ಚ್ 15ರ ನಂತರ ಯಾವುದೇ ಗ್ರಾಹಕರಿಂದ ಠೇವಣಿ ಮತ್ತು ಕ್ರೆಡಿಟ್‌ ಗಳನ್ನು ಸ್ವೀಕರಿಸದಂತೆ ರಿಸರ್ವ್ ಬ್ಯಾಂಕ್ ಪಿಪಿಬಿಎಲ್‌ ಅನ್ನು ನಿರ್ಬಂಧಿಸಿದೆ. ಮಾಜಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್ ಮತ್ತು ಮಾಜಿ ಐಎಎಸ್ ಅಧಿಕಾರಿ ರಜನಿ ಸೆಖ್ರಿ ಸಿಬಲ್ ಅವರನ್ನು ನೇಮಕ ಮಾಡಿ ಪಿಪಿಬಿಎಲ್ ತನ್ನ ನಿರ್ದೇಶಕರ ಮಂಡಳಿಯನ್ನು ಪುನರ್ ರಚಿಸಿದೆ ಎಂದು ಪೇಟಿಎಂ ಹೇಳಿದೆ.

Also Read  ನಟ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ನೀಡದಂತೆ ಸಚಿವ ಆರ್. ಅಶೋಕ್ ಒತ್ತಡ ➤ ಅಭಿಮಾನಿ ಸಂಘಗಳ ಒಕ್ಕೂಟ ಆರೋಪ

error: Content is protected !!
Scroll to Top