ಸಿನಿ ಕ್ಷೇತ್ರಕ್ಕೆ ಪಾದಾರ್ಪಣೆಗೈದ ಕೊಟ್ಟ ಅಲ್ಲು ಅರ್ಜುನ್ ಪುತ್ರ..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಫೆ. 27. ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ನಟಿಸುತ್ತಿರುವ ಪುಷ್ಪ-2 ಸಿನೆಮಾದ ಮೂಲಕ ಪುತ್ರ ಅಲ್ಲು ಅಯಾನ್ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದ್ದು, ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕೂಡಾ ಪುಷ್ಪ 2 ಸಿನಿಮಾ ಕುರಿತಂತೆ ಅನೇಕ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಸಿನಿಮಾ ನಿರ್ದೇಶಕ ಸುಕುಮಾರನ್ ಅವರೇ ಪುಷ್ಪ 2 ಕುರಿತಂತೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಬಜೆಟ್ ಗೆ ಸಂಬಂಧಿಸಿ ಮಾತನಾಡಿದ ಅವರು, ಪುಷ್ಪ 2 ಚಿತ್ರದ ಬಜೆಟ್ ಡಬಲ್ ಆಗಿದೆ. ಸಿನಿಮಾ ತುಂಬಾ ರಿಚ್ ಆಗಿ ಮೂಡಿಬರಲಿದೆ ಎಂದಿದ್ದಾರೆ.

Also Read  ಮತ್ತೆ ಚಿನ್ನದ ದರದಲ್ಲಿ ಏರಿಕೆ ➤ ಗ್ರಾಹಕರಿಗೆ ನಿರಾಸೆ

error: Content is protected !!
Scroll to Top