‘49 ರೂಪಾಯಿಗೆ 48 ಮೊಟ್ಟೆ’; ಮೊಬೈಲ್ ಸಂದೇಶಕ್ಕೆ 49 ಸಾವಿರ ರೂ. ಕಳೆದುಕೊಂಡ ಮಹಿಳೆ

(ನ್ಯೂಸ್ ಕಡಬ) neskadaba.com ಬೆಂಗಳೂರು, ಫೆ. 26. ‘49 ರೂಪಾಯಿಗೆ 48 ಮೊಟ್ಟೆ ಸಿಗಲಿದೆ’ ಎಂದು ಎಂಬ ಮೊಬೈಲ್ ಸಂದೇಶದ ಲಿಂಕ್ ಒತ್ತಿ ಗ್ರಾಹಕರೊಬ್ಬರು 48,199 ರೂ. ಕಳೆದುಕೊಂಡಿರುವ ಘಟನೆ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ವಸಂತನಗರದ ನಿವಾಸಿ ಮಹಿಳೆಯೊಬ್ಬರಿಗೆ ಫೆ. 17ರಂದು ಇ-ಮೇಲ್‍ ಮೂಲಕ ಆನ್‍ ಲೈನ್ ಶಾಪಿಂಗ್ ಕಂಪೆನಿಯೊಂದರಿಂದ ಸಂದೇಶ ಬಂದಿತ್ತು. ಇದನ್ನು ನೋಡಿದ ಮಹಿಳೆ 48 ಮೊಟ್ಟೆಗಳಿಗೆ ಕೇವಲ 49 ರೂಪಾಯಿ ಆಫರ್ ಇರುವುದನ್ನು ಕಂಡು ಬುಕ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಅದರಲ್ಲಿ ಡೆಲಿವರಿ ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಕೊನೆಗೆ ಪೇಮೆಂಟ್ ಆಪ್ಶನ್‍ ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವಂತೆ ಸೂಚಿಸಿತ್ತು. ಹೀಗಾಗಿ ಮಹಿಳೆಯು ಹಣ ಪಾವತಿಸಲು ಕ್ರೆಡಿಟ್ ಕಾರ್ಡ್‍ನ ಡಿಟೇಲ್ಸ್ ಭರ್ತಿ ಮಾಡಿ ಬಳಿಕ ಮೊಬೈಲ್‍ಗೆ ಬಂದ ಒಟಿಪಿ ನಂಬರ್ ನಮೂದಿಸಿ 49 ರೂ.ಪಾವತಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಮಹಿಳೆಯ ಬ್ಯಾಂಕ್ ನಿಂದ 48,199 ರೂಪಾಯಿ ಕಡಿತಗೊಂಡಿರುವ ಬಗ್ಗೆ ಸಂದೇಶ ಬಂದಿತ್ತು ಎಂದು ಹೇಳಲಾಗಿದೆ. ಮಹಿಳೆ ಆಶ್ಚರ್ಯಗೊಂಡು ಪರಿಶೀಲಿಸಿದಾಗ 48,199 ಸಾವಿರ ರೂ.ಹಣ ಕಡಿತವಾಗಿರುವುದು ದೃಢವಾಗಿತ್ತು. ವಂಚನೆಗೊಳಗಾಗಿರುವುದು ಗೊತ್ತಾಗಿ ತಕ್ಷಣವೇ ಬ್ಯಾಂಕ್‍ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

Also Read  ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ     ➤ ಆರೋಪಿಗೆ 62 ವರ್ಷ ಸಜೆ ಮತ್ತು 1 ಲಕ್ಷ ರೂ. ದಂಡ

error: Content is protected !!
Scroll to Top