ಕಡಬ: ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ 4ನೇ ಶಾಖೆ ಉದ್ಘಾಟನೆ

(ನ್ಯೂಸ್ ಕಡಬ) neskadaba.com ಕಡಬ, ಫೆ. 26. ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ 4ನೇ ಶಾಖೆಯು ಕಡಬದ ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ  ಸೈಂಟ್ ಜೋಕಿಮ್ಸ್ ಚರ್ಚ್ ನ ರೇ.ಫಾ ಪ್ರಕಾಶ್ ಪೌಲ್, ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಬೈಪಡಿತ್ತಾಯ, ದುರ್ಗಾಂಬಿಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸೀತಾರಾಮ ಪೊಸವಳಿಕೆ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಸದಾನಂದ, ಡಾ.ಸುಚಿತ್ರಾ ರಾವ್, ಡಾ ತ್ರಿಮೂರ್ತಿ, ಡಾ.ಬಾಲಸುಬ್ರಹ್ಮಣ್ಯ ಭಟ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಅಲ್ಲದೇ ಪ್ರಗತಿಪರ ಕೃಷಿಕ ವಿಶ್ವೇಶ್ವರ ಭಟ್, ನಿವೃತ್ತ ಶಿಕ್ಷಕ ಜನಾರ್ಧನ ಗೌಡ ಪಣೆಮಜಲು, ಮಹಮದ್ ಕುಂಞ ಅವರನ್ನು ಸನ್ಮಾನಿಸಲಾಯಿತು. ಮ್ಯಾನೆಂಜಿಗ್ ಡೈರೆಕ್ಟರ್ ಆಲ್ವೀನ್ ಜೋಯಲ್ ನೊರೋನ್ಹಾ, ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ಜಿಲ್ಲಾ ಸಂಯೋಜಕ ಸತೀಶ್ ನ್ಯಾಕ್ ಉಪಸ್ಥಿತರಿದ್ದರು.

Also Read  ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟಕ್ನಾಲಜಿಯಲ್ಲಿ ಪಿಜಿಸಿಇಟಿ ತರಬೇತಿ ಕಾರ್ಯಾಗಾರ

error: Content is protected !!
Scroll to Top