ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸ್ಕೂಲ್ ಬಸ್ ನಡಿಗೆ ಬಿದ್ದ ಬಾಲಕ- ಪ್ರಾಣಾಪಾಯದಿಂದ ಪಾರು – News Kadaba

ಸ್ಕೂಲ್ ಬಸ್ ನಡಿಗೆ ಬಿದ್ದ ಬಾಲಕ- ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಸುರತ್ಕಲ್, ಫೆ. 24. ಶಾಲಾ ಬಸ್ಸಿನಿಂದ ಇಳಿದು ರಸ್ತೆ ದಾಟಲು ಮುಂದಾದ ವಿದ್ಯಾರ್ಥಿಯೋರ್ವ ಅದೇ ಬಸ್ಸಿನಡಿಗೆ ಬಿದ್ದ ಘಟನೆ ಸುರತ್ಕಲ್ ನ ಕುಳಾಯಿ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಬಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುರತ್ಕಲ್ ನ ಖಾಸಗಿ ಶಾಲೆಯ ಬಸ್ ಎಂದಿನಂತೆ ವಿದ್ಯಾರ್ಥಿಗಳನ್ನು ಕರೆತಂದು, ವಿದ್ಯಾರ್ಥಿಯೋರ್ವನನ್ನು ಮನೆ ಮುಂದೆ ಇಳಿಸಿದೆ. ಆದರೆ, ಬಸ್ಸಿನಿಂದ ಇಳಿದ ಬಾಲಕ ಬಸ್ ಮುಂಭಾಗದಿಂದಲೇ ರಸ್ತೆ ದಾಟಿದ್ದು, ಇದನ್ನು ಗಮನಿಸದ ಚಾಲಕ ಬಸ್ ನ್ನು ಚಲಾಯಿಸಿದಾಗ ಬಾಲಕ ಬಸ್ ನ ಅಡಿಗೆ ಬಿದ್ದಿದ್ದು, ತಕ್ಷಣವೇ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ ಬೊಬ್ಬೆಹೊಡೆದ ಪರಿಣಾಮ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಅದೃಷ್ಟವಶಾತ್ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Scroll to Top