ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮೆಜೆಸ್ಟಿಕ್‌ನಿಂದ ವೈಟ್ ಫೀಲ್ಡ್ ಕಡೆಗೆ ಹೆಚ್ಚುವರಿ ರೈಲು ಸೇವೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 23. ನಮ್ಮ ಮೆಟ್ರೋ ಪ್ರಯಾಣಿಕರ ಸುಲಭ ಸಂಚಾರಕ್ಕಾಗಿ ದಿನದಿಂದ ದಿನಕ್ಕೆ ಬದಲಾವಣೆಗಳನ್ನು ತರುತ್ತಿದ್ದು. ಇದೀಗ ಮೆಜೆಸ್ಟಿಕ್‌ನಿಂದ ವೈಟ್ ಫೀಲ್ಡ್ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಬೆಳಗ್ಗಿನ ಪೀಕ್ ಆವರ್ ಗಳಲ್ಲಿ ಪ್ರತಿ‌ ಮೂರು ನಿಮಿಷಕ್ಕೆ ಇನ್ಮುಂದೆ ಮೆಟ್ರೋ ಸೇವೆ ಆರಂಭಿಸಲಾಗುತ್ತಿದೆ.

ಬೆಳಿಗ್ಗೆ ಸಮಯದಲ್ಲಿ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಸೋಮವಾರದಿಂದ ಬೆಳಿಗ್ಗೆ 8.45 ರಿಂದ 10.20 ರ ನಡುವೆ ಈ ಮಾರ್ಗದಲ್ಲಿ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿದೆ. ಬೈಯಪ್ಪನಹಳ್ಳಿಯಿಂದ‌ ಕೆ.ಆರ್.ಪುರ ಲಿಂಕ್‌ ಕನೆಕ್ಟ್ ಆದ ಮೇಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಿರುವುದರಿಂದ ಹೆಚ್ಚುವರಿ ಮೆಟ್ರೋ ಬಿಡಿ ಅಂತ ಬಿಎಂಆರ್ ಸಿಎಲ್ ಗೆ ಹಲವು ಬಾರಿ ಜನರು ಮನವಿ ಮಾಡಿದ್ದು, ಹೀಗಾಗಿ ಸೋಮವಾರದಿಂದ ಬೆಳಗಿನ ದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ಮೆಟ್ರೋ ಸೇವೆಯು ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆಆರ್ ಪುರ ಕಡೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಆದರೆ ಶನಿವಾರ, ಭಾನುವಾರ ಮತ್ತು ರಜಾದಿನ ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಹೆಚ್ಚುವರಿ ರೈಲು ಸೇವೆ ಜೊತೆಗೆ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸೇವೆ ಆರಂಭಗೊಳ್ಳುವುದು ಎಂದು BMRCL ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಯುವತಿ ಮೇಲೆ ಅತ್ಯಾಚಾರ..!       ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ವಿರುದ್ಧ ಎಫ್ ಐಆರ್ ದಾಖಲು..!

error: Content is protected !!
Scroll to Top