ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು ಜನನ

(ನ್ಯೂಸ್‌ ಕಡಬ)newskadaba.com ಮುಂಬೈ, ಫೆ.20: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15ರಂದೇ ಗಂಡು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದು ಈ ಸಂತಸದ ಸುದ್ದಿಯನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಗುವಿಗೆ ಅಕಾಯ್ ಎಂದು ವಿಭಿನ್ನ ಹೆಸರಿಟ್ಟಿದ್ದಾರೆ. ವಾಮಿಕಾಳ ಕಿರಿಯ ಸಹೋದರನನ್ನು ಜಗತ್ತಿಗೆ ಸ್ವಾಗತ ಎಂದು ಅನುಷ್ಕಾ ಬರೆದಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ ಪೋಸ್ಟ್‌ನಲ್ಲಿ ‘ನಮ್ಮ ಹೃದಯದಲ್ಲಿ ಬಹಳ ಸಂತೋಷ ಮತ್ತು ಪ್ರೀತಿಯಿಂದ, ಫೆಬ್ರವರಿ 15ರಂದು ನಾವು ಅಕಾಯ್ ಮತ್ತು ವಾಮಿಕಾ ಅವರ ಚಿಕ್ಕ ಸಹೋದರನನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ಬರೆದಿದ್ದಾರೆ.

Also Read  ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಹಿಂದಿ ದಿನಾಚರಣೆ

ನಿಮ್ಮ ಆಶೀರ್ವಾದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ. ಈ ಸಮಯದಲ್ಲಿ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ ನಿಮ್ಮ ಪ್ರೀತಿಯ ವಿರಾಟ್ ಮತ್ತು ಅನುಷ್ಕಾ ಎಂದು ಬರೆದಿದ್ದಾರೆ. ಅನುಷ್ಕಾ ಮತ್ತು ವಿರಾಟ್ 2017ರಲ್ಲಿ ಇಟಲಿಯಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. 2021ರ ಜನವರಿಯಲ್ಲಿ ಅನುಷ್ಕಾ ಮಗಳು ವಾಮಿಕಾಗೆ ಜನ್ಮ ನೀಡಿದರು. ಮದುವೆಯ ನಂತರ ಅನುಷ್ಕಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಅವರ ಕೊನೆಯ ಚಿತ್ರ 2018ರಲ್ಲಿ ಬಿಡುಗಡೆಯಾಗಿದ್ದ ಝೀರೋ.

error: Content is protected !!
Scroll to Top