(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಫೆ. 20. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ರೇಡಿಯಾಲಜಿ ವಿಭಾಗಕ್ಕೆ ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 29ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ರೂ.2500/- ಇರುತ್ತದೆ. ಸಂದರ್ಶನವು ದಿನಾಂಕ: 29.02.2024 ಪೂರ್ವಾಹ್ನ 11.00 ಗಂಟೆ, ಸಿಮ್ಸ್ ಸಂಸ್ಥೆಯ ನಿರ್ದೇಶಕರ ಸಭಾ ಕೊಠಡಿ ಶಿವಮೊಗ್ಗದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿ, ಮೂಲ ಅಧಿಸೂಚನೆ ಅರ್ಹತೆ ಮತ್ತು ಅರ್ಜಿ ನಮೂನೆ ಕುರಿತಂತೆ ಸಂಸ್ಥೆಯ ವೆಬ್‍ಸೈಟ್ ಮತ್ತು ಸಂಸ್ಥೆಯ ಸೂಚನಾ ಪಲಕ ನೋಡಬಹುದೆಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.