ಮಣಿಪಾಲ ಪರಿಸರದಲ್ಲಿ ಚಿರತೆ ಓಡಾಟ- ಕಾರ್ಯಾಚರಣೆಯಲ್ಲಿ ತೊಡಗಿದ ಅರಣ್ಯ ಇಲಾಖೆ

(ನ್ಯೂಸ್ ಕಡಬ) newskadaba.com ಮಣಿಪಾಲ, ಫೆ. 20. ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲ ಹಾಗೂ ಸರಳೇಬೆಟ್ಟು ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯವರು ಬೋನು ಇಟ್ಟು ಕಾರ್ಯಾಚರಣೆ ನಡೆಸಿದ್ದಾರೆ.

ಪರ್ಕಳದ ಸಣ್ಣಕ್ಕೀಬೆಟ್ಟುವಿನಲ್ಲಿ ಸೋಮವಾರ ಹಗಲು ಹೊತ್ತಿನಲ್ಲಿಯೇ ಚಿರತೆಯೊಂದು ನವಿಲನ್ನು ಹಿಡಿದು ತಿನ್ನುವ ದೃಶ್ಯ ಕಂಡುಬಂದಿದೆ ಎಂದು ಸಣ್ಣಕ್ಕಿಬೆಟ್ಟುವಿನ ಆಟೋ ಚಾಲಕರೋರ್ವರು ತಿಳಿಸಿದ್ದಾರೆ. ಮಣಿಪಾಲದ ಎಂಡ್ ಪಾಯಿಂಟ್ ಸಮೀಪದ ವಿಜಯನಗರ ಪರಿಸರದಲ್ಲಿ ಚಿರತೆಯ ಆರ್ಭಟ ಕೇಳಿಸುತ್ತಿದ್ದು, ಇಲ್ಲಿ ಬೋನು ತಂದು ಇಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಲ್ಲದೇ ಸರಳೇಬೆಟ್ಟುವಿನ ಕೋಡಿಯಲ್ಲಿಯೂ ಕೂಡ ಚಿರತೆಯ ಸಂಚಾರ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Also Read  ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿ ಅರೆಸ್ಟ್

error: Content is protected !!
Scroll to Top