ಚಿರತೆ ದಾಳಿ- ಜೋಡಿಕರುಗಳು ಬಲಿ

(ನ್ಯೂಸ್ ಕಡಬ) newskadaba.com ಗುಂಡ್ಲುಪೇಟೆ, ಫೆ. 19. ಚಿರತೆ ದಾಳಿಗೆ ಜೋಡಿಕರುಗಳು ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕೊಡಸೋಗೆ ಗ್ರಾಮದಲ್ಲಿ ನಡೆದಿದೆ.

ಕೊಡಸೋಗೆ ಗ್ರಾಮದ ನಾಗೇಶ್ ಎಂಬವರು ತನ್ನ ಜಮೀನಿನಲ್ಲಿ ಕರುಗಳನ್ನು ಮೇಯಲು ಬಿಟ್ಟಿದ್ದ ವೇಳೆ ದಾಳಿ ನಡೆಸಿದ ಚಿರತೆಯು ಎರಡು ಕರುಗಳನ್ನ ಬಲಿ ಪಡೆದಿದೆ ಎನ್ನಲಾಗಿದೆ. ಇತ್ತೀಚೆಗೆ ಈ ಪರಿಸರದಲ್ಲಿ ಚಿರತೆ ಕಾಟ ಮಿತಿಮೀರಿದ್ದು, ಅರಣ್ಯ ಇಲಾಖೆಯ ನಿರ್ಲಕ್ಸ್ಯಕ್ಕೆ ಆಕ್ರೋಶಗೊಂಡಿರುವ ರೈತರು ಚಿರತೆಯನ್ನ ಸೆರೆಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

Scroll to Top