ಕೊಯಿಲ, ಆತೂರು ಪರಿಸರದಲ್ಲಿ ಜಾನುವಾರು ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ತಾಲೂಕಿನ ರಾಮಕುಂಜ ಹಾಗೂ ಕೊಯಿಲ ಗ್ರಾಮದಲ್ಲಿ ರಾತ್ರಿ ವೇಳೆ ನಿರಂತರ ಜಾನುವಾರು ಕಳ್ಳತನ ಆಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಫೆ. 09ರಂದು ರಾತ್ರಿ ಬೆಳಗಾಗುವುದರೊಳಗೆ 8 ಜಾನುವಾರು ಕಳವಾಗಿರುವ ಕುರಿತು ವರದಿಯಾಗಿದೆ.

ಕೊಯಿಲ ಗ್ರಾಮದ ದೇವಳ ಬಳಿ ನಿವಾಸಿಗಳಾದ ಇಬ್ಬು ಎಂಬವರಿಗೆ ಸೇರಿದ 2 ಹೋರಿ, ರಜಾಕ್ ಎಂಬವರ 1 ಹೋರಿ, ಅಬೂಬಕ್ಕರ್ ಎಂಬವರ 2 ಹೋರಿ, ಮೋನು ಎಂಬವರಿಗೆ ಸೇರಿದ 1 ಹಸು, ಆತೂರು ಪೇಟೆ ನಿವಾಸಿಯೋರ್ವರ 1 ಹಸು ಸೇರಿದಂತೆ ಕೊಯಿಲ ಮತ್ತು ಆತೂರು ಪರಿಸರದಿಂದ 8ಕ್ಕೂ ಅಧಿಕ ಜಾನುವಾರು ಕಳವಾಗಿರುವುದಾಗಿ ವರದಿಯಾಗಿದೆ. ತಿಂಗಳ ಹಿಂದೆ ಕೊಯಿಲ ಗ್ರಾಮದ ಗಂಡಿಬಾಗಿಲು ಪರಿಸರದಿಂದಲೂ ಜಾನುವಾರು ಕಳ್ಳತನವಾಗಿದ್ದು, ಈ ಪ್ರದೇಶದಲ್ಲಿ ನಿರಂತರವಾಗಿ ಜಾನುವಾರು ಕಳ್ಳತನ ನಡೆಯುತ್ತಿರುವುದಾಗಿ ಗ್ರಾಮಸ್ಥರು ದೂರಿಕೊಂಡಿದ್ದಾರೆ. ಕೆಲ ದಿನಗಳಿಂದ ಆತೂರು ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ಪಿಕ್‌ಆಪ್ ವಾಹನವೊಂದು ಓಡಾಟ ನಡೆಸುತ್ತಿದ್ದು, ಯಾರೋ ಕಳ್ಳರು ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗಳಿಗೆ ಸಾಗಾಟ ಮಾಡಿರುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತವಾಗಿದೆ.

Also Read  ► 'ನ್ಯೂಸ್ ಕಡಬ' ಮೊಬೈಲ್ ಅಪ್ಲಿಕೇಶನ್ ಅನಾವರಣ

error: Content is protected !!
Scroll to Top