ಬೆಳ್ತಂಗಡಿ: ವ್ಯಕ್ತಿಯ ಕೊಲೆಗೈದ ತಂದೆ, ಸಹೋದರನ ಬಂಧನ ► ಹತ್ಯೆಗೈದು 24 ಗಂಟೆಗಳೊಳಗೆ ಆರೋಪಗಳನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ತನ್ನ ಮಗನನ್ನು ಚೂರಿಯಿಂದ ಇರಿದು ಕೊಲೆ‌ ಮಾಡಿ ಪರಾರಿಯಾಗಿದ್ದ ಬೆಳ್ತಂಗಡಿಯ ಜ್ಯೋತಿಷಿಗಳಾದ ಮಂಜುನಾಥ ಹಾಗೂ ಆತನ ಮತ್ತೋರ್ವ ಪುತ್ರ ರಾಘವೇಂದ್ರನನ್ನು ಜಿಲ್ಲಾ ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

ತಂದೆ ಮಗ ಸೇರಿ ನವೀನ್‌ನನ್ನು ಕೊಲೆಗೈದು ರಾತ್ರಿಯೇ ಕಾರಿನಲ್ಲಿ ಪರಾರಿಯಾಗಿದ್ದರು. ಇದರ ಸುಳಿವು ಅರಿತ ಪೊಲೀಸರು ನೆರೆ ಜಿಲ್ಲೆಗಳಲ್ಲಿ ನಾಕಾಬಂಧಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ನವೀನ್‌ನನ್ನು ಆತನ ತಂದೆ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಭಾನುವಾರ ರಾತ್ರಿ ಚೂರಿಯಿಂದ ಇರಿದು ಹತ್ಯೆಗೈದಿದ್ದರು.

Also Read  ಪೆರುವಾಜೆ: ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಧೀಶರು ಭೇಟಿ                                                            

error: Content is protected !!
Scroll to Top