“ಬದುಕಲು ಕಲಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದ” – ವಿವೇಕಾನಂದ ಜಯಂತಿ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಸ್ವಾಮಿ ವಿವೇಕಾನಂದರು ನಡೆದು ಬಂದ ದಾರಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಬೇಕು. ಅವರ ಚಿಂತನೆಗಳನ್ನು ನಿರಂತರ ಅಭ್ಯಾಸಿಸಬೇಕು. ಅದುವೇ ಈ ಕಾರ್ಯಕ್ರಮ ಉದ್ದೇಶವಾಗಿದೆ. ವಿವೇಕಾನಂದರು ಇಡೀ ದೇಶಕ್ಕೆ ಸಂಸ್ಕೃತಿಯನ್ನು ಸಾರಿದ ವ್ಯಕ್ತಿ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸ್ವಾಮಿ ವಿವೇಕಾನಂದರು ಇಡೀ ಪ್ರಪಂಚದಲ್ಲಿ ಬದುಕಲು ಕಲಿಸಲು ಕಲಿಸಿಕೊಟ್ಟ ಮಹಾನ್ ವ್ಯಕ್ತಿ. ನಾವು ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ, ನಿರಂತರ ಪ್ರಯತ್ನ ಮಾಡಿದರೆ ಅದಕ್ಕೆ ನಮ್ಮ ಗುರುಗಳ ಆಶೀರ್ವಾದ ಖಂಡಿತ ಇರುತ್ತದೆ ಎಂದು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಅವರು ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ಎನ್ ಸಿ. ಸಿ ಆಲುಮಿ ಅಸೋಸಿಯೇಶನ್ ಮಂಗಳೂರು, ರಾಷ್ಟ್ರೀಯ ಸೇವಾಯೋಜನೆ ಸಹಭಾಗಿತ್ವದಲ್ಲಿ ಯುವನಿಕಾ ಫೌಂಡೇಶನಿನ ನೇತೃತ್ವದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ ರಾಷ್ಟ್ರೀಯ ಯುವದಿನಾಚರಣೆ ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ರಘುವೀರ್ ಸೂಟರ್ ಪೇಟೆಯವರು ನಡೆಸಿ, ಯುವಜನ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ನೆರವಾಗಬೇಕೆಂದು ಹೇಳಿದರು.

Also Read  ಅಪ್ರಾಪ್ತೆಯನ್ನು ವಿವಾಹವಾಗಿ ಬಳಿಕ ಕೊಂದು ಹೂತಿಟ್ಟ ಗಂಡ ➤ 15 ದಿನಗಳ ನಂತರ ಪ್ರಕರಣ ಬೆಳಕಿಗೆ

ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಎಸ್ ಅವರು ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಯವ ಜನರಪಾತ್ರ ಪ್ರಮುಖ ಎಂದು ಹೇಳಿದರು. ಎನ್.ಎಸ್.ಎಸ್ ಡಿಪಾರ್ಟ್ಮೆಂಟ್ ಆಫ್ ಸ್ಕೂಲ್ ಆಫ್ ಎಜುಕೇಶನ್ ಡಿವಿಷನ್ ಆಫೀಸರ್ ಸವಿತಾ ಏರ್ಮಾಳ್ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕನಾಧಿಕಾರಿ ಡಾ. ನಾಗರತ್ನ ಕೆ.ಎ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯುವನಿಕಾ ಫೌಂಡೇಶನ್ ನ ಸದಸ್ಯೆ ಕುಮಾರಿ ಅಶ್ವಿನಿ ಸ್ವಾಗತಿಸಿದರು. ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರಕ್ಷಾ ವಂದಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಕರಾವಳಿ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಎಂ. ಜೈಕಿಶೇನ್ ಭಟ್, ಪ್ರಥಮೇಶ್ ಶೆಣೈ ಹಾಗೂ ಹಿತೇಶ್ ಸೂಟರ್ ಪೇಟೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 800 ಹೆಚ್ಚಿನ ಸಂಖ್ಯೆಯಲ್ಲಿ ಯವಜನರು ಭಾಗವಹಿಸಿದರು.

Also Read  ಏಣಿತಡ್ಕ: ಕಿಂಡಿ ಅಣೆಕಟ್ಟು ಶಂಕುಸ್ಥಾಪನೆ

error: Content is protected !!
Scroll to Top