ಸುಚನಾ ಸೇಠ್ ಪ್ರಕರಣ- ಮರಣೋತ್ತರ ಪರೀಕ್ಷೆಯಲ್ಲಿ ಸತ್ಯಾಂಶ ಬಯಲು..!

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಜ. 10. ಬೆಂಗಳೂರು ಸ್ಟಾರ್ಟ್‌ ಅಪ್‌ ಸಿಇಒ ಸುಚನಾ ಸೇಠ್ ತನ್ನ ಮಗುವನ್ನೇ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿ, ಒಂದೊಂದೇ ಸತ್ಯಾಂಶ ಹೊರಬೀಳುತ್ತಿದ್ದು, ಇದೀಗ ಮಗುವಿನ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡು, ಹತ್ಯೆ ನಡೆಸಿರುವ ಭೀಕರತೆಯನ್ನು ವೈದ್ಯಾಧಿಕಾರಿ ಬಿಚ್ಚಿಟ್ಟಿದ್ದಾರೆ.


ಮೃತ ಮಗುವಿನ ಮರಣೋತ್ತರ ಪರೀಕ್ಷೆಯನ್ನು ನಡೆಸಿರುವ ಹಿರಿಯೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕುಮಾರ ನಾಯ್ಕ್, ಡಾ.ರಂಗೇಗೌಡ ಮಾತನಾಡಿ, 36 ಗಂಟೆಗಳ ಹಿಂದೆಯೇ ಮಗುವಿನ ಹತ್ಯೆಯಾಗಿದೆ. ಕೈಯಿಂದ ಕತ್ತು ಹಿಸುಕಿ ಹತ್ಯೆ ಮಾಡಿಲ್ಲ. ಬದಲಾಗಿ ತಲೆ ದಿಂಬು ಅಥವಾ ಬೇರೆ ವಸ್ತುವಿನಿಂದ ಉಸಿರುಗಟ್ಟಿಸಲಾಗಿದ್ದು, ಈ ಕಾರಣದಿಂದ ಮಗುವಿನ ಮುಖ ಹಾಗೂ ಎದೆಭಾಗ ಊದಿಕೊಂಡಿದೆ. ಹೀಗಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದೆ ಎಂದು ತಿಳಿಸಿದ್ದಾರೆ.

Also Read  ಲಾರಿ ತಡೆದು 1.64 ಲಕ್ಷ ರೂ. ದರೋಡೆ: ದೂರು ದಾಖಲು

error: Content is protected !!
Scroll to Top