ಫೆಬ್ರವರಿ 18 ರಿಂದ 22 ರವರೆಗೆ ನೆಕ್ಕಿತ್ತಡ್ಕ ಮಖಾಂ ಉರೂಸ್ ► ಉರೂಸ್ ಅಂಗವಾಗಿ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಫೆ.11. ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಜುಮಾ ಮಸೀದಿಯ ಅಧೀನದಲ್ಲಿರುವ ನೆಕ್ಕಿತ್ತಡ್ಕ ಮಖಾಂನಲ್ಲಿ ಫೆಬ್ರವರಿ 18 ರಿಂದ 22 ರ ವರೆಗೆ ನಡೆಯಲಿರುವ ಉರೂಸ್ ಅಂಗವಾಗಿ ದೇರಳಕಟ್ಟೆ ಯೇನೆಪೋಯ ದಂತ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ ಹಾಗೂ YEN ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರವು ಭಾನುವಾರದಂದು ಮರ್ಧಾಳ ಮದರಸ ಹಾಲ್‌ನಲ್ಲಿ ನಡೆಯಿತು.

70 ಕ್ಕೂ ಅಧಿಕ ಸಾರ್ವಜನಿಕರು ದಂತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದರು. ಸಭಾಧ್ಯಕ್ಷತೆಯನ್ನು ಮರ್ಧಾಳ ಜುಮಾ ಮಸೀದಿಯ ಅಧ್ಯಕ್ಷರಾದ ಸಯ್ಯದ್ ಹಮೀದ್ ತಂಙಳ್ ವಹಿಸಿದ್ದರು. ವೇದಿಕೆಯಲ್ಲಿ ಖತೀಬರಾದ ಹನೀಫ್ ಸಖಾಫಿ ಎಮ್ಮೆಮ್ಮಾಡು, ಉರೂಸ್ ಕಮಿಟಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್, ಯೇನೆಪೋಯ ದಂತ ವೈದ್ಯಕೀಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಲಕ್ಷ್ಮೀನಾರಾಯಣ ಶಂಡೆ ಮೊದಲಾದವರು ಉಪಸ್ಥಿತರಿದ್ದರು. ಹೈದರ್ ಕೋಹಿನೂರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹನೀಫ್ ಮರ್ಧಾಳ ವಂದಿಸಿದರು.

Also Read  ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

 

error: Content is protected !!
Scroll to Top