ಪ್ರಧಾನಿ ಮೋದಿ ದುಬೈ ಭೇಟಿ ಹಿನ್ನೆಲೆ ► ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿದ ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.10. ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ದುಬೈಯ ಪ್ರಸಿದ್ಧ ಕಟ್ಟಡಗಳು ಶುಕ್ರವಾರ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿವೆ.

ಜಗತ್ತಿನ ಅತೀ ಹೆಚ್ಚು ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ, ತೈಲ ಕಂಪೆನಿ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪೆನಿ (ಎಡಿಎನ್ಒಸಿ) ಹಾಗು ಜಗತ್ತಿನ ಅತೀ ದೊಡ್ಡ ಪಿಕ್ಚರ್ ಫ್ರೇಮ್ ಎಂಬ ಖ್ಯಾತಿಯ ದುಬೈ ಫ್ರೇಮ್ ಭಾರತದ ಧ್ವಜದ ಮೂರು ಬಣ್ಣಗಳಿಂದ ಕಂಗೊಳಿಸಿತು.‌ ಶನಿವಾರದಂದು ಸಂಜೆ ಪ್ರಧಾನಿ ಮೋದಿ ಅಬುಧಾಬಿಗೆ ತಲುಪಲಿದ್ದು, ಅಲ್ಲಿನ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ರನ್ನು ಭೇಟಿಯಾಗಿ ಕುಶಲೋಪರಿ ನಡೆಸಲಿದ್ದಾರೆ.

Also Read  ಟ್ವಿಟರ್ ಲೋಗೋ ಬದಲಾವಣೆಗೆ ಎಲಾನ್ ಮಸ್ಕ್ ಚಿಂತನೆ

error: Content is protected !!
Scroll to Top