ಕೊಂಕಣಿ ಭಾಷಾ ಮಂಡಳ್ ಕರ್ನಾಟಕಕ್ಕೆ ಜೆಸ್ವಿತ್ ಕೊಂಕಣಿ ಸಂಸ್ಥೆಗಳ ಬೆಂಬಲ

(ನ್ಯೂಸ್ ಕಡಬ) newskadaba.com  ಮಂಗಳೂರು, ನ. 22. ಕೊಂಕಣಿ ಮಾತೃಭಾಷೆಯ ಸೇವೆಯಲ್ಲಿ ಹಿರಿಯ ಎರಡು ಸಂಸ್ಥೆಗಳು ಒಟ್ಟಾಗಿದ್ದು ಇದು ಶುಭ ಸೂಚನೆಯಾಗಿದೆ ಎಂದು ರೆ|ಫಾ|ಮೆಲ್ವಿನ್ ಪಿಂಟೊ ನುಡಿದರು. ಅವರು ಜೆಸ್ವಿತ್ ಶಿಕ್ಷಣ ಸಂಸ್ಥೆಗಳು ಮಂಗಳೂರು ಇವುಗಳ ರೆಕ್ಟರ್ ಆಗಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇವರ ಐವತ್ತು ವರ್ಷಗಳ ಆಚರಣೆಗೆ ತಮ್ಮ ದೇಣಿಗೆಯನ್ನು ನೀಡಿ ಮಾತನಾಡಿದರು.

ಜನವರಿ ಒಂಭತ್ತರಂದು ಪುರಭವನದಲ್ಲಿ ನಡೆಯುವ ಒಂದು ದಿನದ ಆಚರಣೆಗೆ ತಮ್ಮ ಆಡಳಿತದ ಸೈಂಟ್ ಅಲೋಶಿಯಸ್ ಕಾಲೇಜು ಕೊಂಕಣಿ ವಿಭಾಗಗಳು ಸಕ್ರಿಯವಾಗಿ ‌ಭಾಗವಹಿಸಲಿವೆ ಎಂದು ಭರವಸೆಯನ್ನು ನೀಡಿದರು. ಕಾರ್ಯಕ್ರಮ ‌ಸಂಚಾಲಕರು ಹಾಗೂ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ‌ರೇಮಂಡ್ ಡಿಕೂನಾ ‌ಮಾಹಿತಿಯನ್ನು ನೀಡಿದರು. ಅಧ್ಯಕ್ಷ ಕೆ ವಸಂತ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ರತ್ನಾಕರ ಕುಡ್ವಾ, ಅಲೋಶಿಯಸ್ ಕೊಂಕಣಿ ಸಂಸ್ಥೆಯ ಸಂಯೋಜಕರಾದ ಪ್ಲೊರಾ ಕಸ್ತೆಲಿನೊ ಹಾಗೂ ಜೋಕಿಂ ಪಿಂಟೊ ಹಾಜರಿದ್ದರು.

error: Content is protected !!
Scroll to Top