(ನ್ಯೂಸ್ ಕಡಬ) newskadaba.com ಮಂಗಳೂರು, ನ. 22. ದಕ್ಷಿಣ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-ಹಂತ 4 ರ ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಬಜಪೆ ಪಟ್ಟಣ ಪಂಚಾಯಿತಿಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಪರಿಶೀಲನೆ ನಡೆಸಿದರು.
ರೂ. 90 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಬಸ್ ನಿಲ್ದಾಣದ ಕಾಮಗಾರಿ, ರಸ್ತೆ ಮತ್ತು ಚರಂಡಿಗಳ(ಪಾದಾಚಾರಿ ರಸ್ತೆ ಅಭಿವೃದ್ಧಿ) ಕಾಮಗಾರಿಗಳಿಗೆ ಮೀಸಲಿಟ್ಟ ರೂ. 237.66 ಲಕ್ಷಗಳ ಪೈಕಿ ಪೂರ್ಣಗೊಂಡಿರುವ ರೂ. 96 ಲಕ್ಷಗಳ ವೆಚ್ಚದ ಕಾಮಗಾರಿಗಳ ಪೈಕಿ ಶೇ. 25%ರಷ್ಟು ಕಾಮಗಾರಿಗಳನ್ನು ಹಾಗೂ ನಗರೋತ್ಥಾನ-ಹಂತ 4 ಯೋಜನೆಯಡಿಯಲ್ಲಿ ಮಂಜೂರಾಗಿರುವ ಶೇ.5% ಪ್ರೋತ್ಸಾಹ ನಿಧಿಯ ಕಾಮಗಾರಿಗಳ ಪೈಕಿ ಶೇ.25% ರಷ್ಟು ಕಾಮಗಾರಿಗಳಿಗಿಂತ ಕಾಂಕ್ರಿಟ್ ರಸ್ತೆ, ಚರಂಡಿಗಳ ನಿರ್ಣಯ ಹಾಗೂ ರಿಟೈನಿಂಗ್ ವಾಲ್ ನಿರ್ಮಾಣ ಕಾಮಗಾರಿಗಳನ್ನು ನವೆಂಬರ್ 20ರಂದು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಬಜಪೆ ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಕಂದಾಯ ವಿಭಾಗ ಜನರ ಮರಣ ವಿಭಾಗ ಐಟಿ ಕೋಶ ಕಟ್ಟಡ ನಿರ್ಮಾಣಗಳ ಕಡತ ಕೆಎಂಎಫ್ 24 ರಿಜಿಸ್ಟರ್ ಮತ್ತು ಮುಂತಾದ ಅಂಶಗಳ ಬಗ್ಗೆ ಪರಿಶೀಲಿಸಿ ಸರಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಸಾರ್ವಜನಿಕರಿಗೆ ತ್ವರಿತ ಗತಿಯಲ್ಲಿ ಒದಗಿಸಲು ಸೂಕ್ತ ಕ್ರಮ ವಹಿಸುವಂತೆ ಮುಖ್ಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.