ಗೇಟ್‌ ಕಳಚಿ ಬಿದ್ದು 3 ವರ್ಷದ ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com ಕೋಟ, . 22. ಆಟವಾಡುತ್ತಿದ್ದ ವೇಳೆ ಗೆಸ್ಟ್ ಹೌಸ್ ನ ಗೇಟೊಂದು ಮೈಮೇಲೆ ಬಿದ್ದು ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ಕೋಟದ ಕೋಟತಟ್ಟು ಪಡುಕರೆಯಲ್ಲಿ ಮಂಗಳವಾರದಂದು ಸಂಜೆ ನಡೆದಿದೆ.

ಮೃತ ಮಗುವನ್ನು ಸ್ಥಳೀಯ ನಿವಾಸಿಯಾಗಿರುವ ಸುಧೀರ್‌ ಮೊಗವೀರ ಹಾಗೂ ಶಾರದ ದಂಪತಿಗಳ ಅವರ ಏಕೈಕ ಪುತ್ರ, ಮೂರು ವರ್ಷದ ಸುಶಾಂತ್‌ ಎಂದು ಗುರುತಿಸಲಾಗಿದೆ. ಮನೆಯ ಸಮೀಪವಿರುವ ಗೆಸ್ಟ್‌ ಹೌಸ್‌ನ ಗೇಟಿನ ಬಳಿ ಮಗು ಆಟವಾಡುತ್ತಿದ್ದಾಗ ಸ್ಲೈಡಿಂಗ್ ಗೇಟ್‌ ಕಳಚಿ ಮೈಮೇಲೆ ಬಿದ್ದಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮಂಗಳೂರು: ಆನ್‌ಲೈನ್ ವಂಚನೆ ➤ ಲಕ್ಷಾಂತರ ರೂ. ಹಣ ಕಳೆದುಕೊಂಡ ವ್ಯಕ್ತಿ

error: Content is protected !!
Scroll to Top