ಮುಖದ ಸೌಂದರ್ಯ ಹೆಚ್ಚಿಸಬೇಕೇ..?- ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ ನೋಡಿ

(ನ್ಯೂಸ್ ಕಡಬ) newskadaba.com ಅ. 14. ಈಗಿನ ಕಾಲದಲ್ಲಿ ಯುವತಿಯರು ಮುಖದ ಸೌಂದರ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ. ಅದಕ್ಕಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಪ್ರಾಡಕ್ಟ್ಸ್ ಗಳನ್ನು ಯುವತಿಯರು ಬಳಸುತ್ತಾರೆ. ಹೀಗೆ ಮಾಡುವುದರಿಂದ ಉಪಯೋಗಕ್ಕಿಂತ ಸಮಸ್ಯೆಗಳುಂಟಾಗುವುದೇ ಹೆಚ್ಚು, ಆದ್ದರಿಂದ ಹೀಗೆ ಮಾಡುವ ಬದಲು ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್ ಹಾಗೂ ಫೇಸ್ ಮಾಸ್ಕ್ ಗಳನ್ನು ತಯಾರಿಸಿ ಉಪಯೋಗಿಸುವುದು ಒಳಿತು. ಜೊತೆಗೆ ಇದು ಸೇಫ್ ಎಂದೂ ಹೇಳಬಹುದು.

ಪಪ್ಪಾಯಿ ಹಣ್ಣು, ಜೇನುತುಪ್ಪ, ಅಲೋವೆರಾ, ಅರಿಶಿಣ ಹೀಗೆ ಕೆಲವೊಂದು ಮನೆಯಲ್ಲೇ ಸಿಗುವಂತ ವಸ್ತುಗಳಿಂದ ಫೇಸ್ ಪ್ಯಾಕ್ ಗಳನ್ನು ಸ್ವತಃ ಮನೆಯಲ್ಲೇ ಮಾಡಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮುಖದ ಮೇಲಿನ ಕೆಲವೊಂದು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೀಗಾಗಿ ನಾವು ಅಡುಗೆಯಲ್ಲಿ ಬಳಸುವಂತಹ ಬೆಂಡೆಕಾಯಿಯನ್ನು ಉಪಯೋಗಿಸಿಕೊಂಡು ಹೇಗೆ ಮುಖದ ಸಮಸ್ಯೆಗಳಿಂದ ದೂರ ಉಳಿಯಬಹುದು ಮತ್ತು ಹೇಗೆ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುವುದು ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

Also Read  ಸುಳ್ಯ: ಕೆರೆಗೆ ಬಿದ್ದು ಕೃಷಿಕ ಮೃತ್ಯು

ಸಾಮಾನ್ಯವಾಗಿ ಬೆಂಡೆಕಾಯಿಯನ್ನು ಪಲ್ಯ ಹಾಗೂ ಸಾಂಬಾರ್ ಮಾಡೋದಕ್ಕೆ ಉಪಯೋಗಿಸುತ್ತಾರೆ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಬೆಂಡೆಕಾಯಿ ಮುಖದ ಹಲವು ಸಮಸ್ಯೆಗಳಿಗೆ ರಾಮಬಾಣ ಜೊತೆಗೆ ಕಾಂತಿಯನ್ನೂ ಹೆಚ್ಚಿಸುತ್ತದೆ.

ಬೆಂಡೆಕಾಯಿ ಫೇಸ್ ಪ್ಯಾಕ್ ಮಾಡಲು ವಿಧಾನ- ಮೊದಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ಸಣ್ಣ ಸಣ್ಣ ಪೀಸ್ ಗಳಾಗಿ ಕತ್ತರಿಸಿಕೊಂಡು ನಂತರ ಗ್ರೈಂಡ್ ಮಾಡಿ ಅದಕ್ಕೆ, ಜೇನುತುಪ್ಪ, ಹಾಲಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಟ್ಯಾನ್ ಹೋಗಿ ಮುಖದ ಅಂದ ಹೆಚ್ಚುತ್ತದೆ.

ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಗ್ರೈಂಡ್ ಮಾಡಿ ನಂತರ ಅದಕ್ಕೆ ಸ್ವಲ್ಪ ಟ್ರೀ ಎಣ್ಣೆ, ಜೇನುತುಪ್ಪ, ನಿಂಬೆ ರಸ ಸೇರಿಸಿ, ಚೆನ್ನಾಗಿ ರುಬ್ಬಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಸುಕ್ಕು ಮಾಯವಾಗುತ್ತದೆ. ಹಾಗೆಯೇ ಬೆಂಡೆಕಾಯಿಯನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು. ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಂಡರೆ ಮುಖವನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುವಲ್ಲಿ ಪಾತ್ರ ವಹಿಸುತ್ತದೆ.

Also Read  ಕ್ಯಾನ್ಸರ್, ಹೃದ್ರೋಗ, ಮಧುಮೇಹದ ಅಪಾಯ ಕಡಿಮೆ ಮಾಡುವುದು ಹೇಗೆ?

error: Content is protected !!
Scroll to Top