ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ರಾಜ್ಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ 3 ನೂತನ ಕೂಟ ದಾಖಲೆ – News Kadaba

ರಾಜ್ಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ 3 ನೂತನ ಕೂಟ ದಾಖಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 29. ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಜೂನಿಯರ್ ಮತ್ತು 23 ವರ್ಷ ಪ್ರಾಯದೊಳಗಿನವರ ಅಥ್ಲೆಟಿಕ್ಸ್ ಮೀಟ್-2023ರಲ್ಲಿ 2ನೇ ದಿನವಾದ ಗುರುವಾರದಂದು 3 ಹೊಸ ರಾಜ್ಯ ಕೂಟ ದಾಖಲಾಗಿದೆ.

ಅಂಡರ್-20 ಬಾಲಕರ ವಿಭಾಗದ 10,000 ಮೀ. ಓಟದಲ್ಲಿ 30:34.90 ಸಮಯದಲ್ಲಿ ಗುರಿ ತಲುಪಿದ ಹಾವೇರಿಯ ಶಿವಾಜಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಹಿಂದಿನ ದಾಖಲೆಯು 31:34.3 ಆಗಿತ್ತು. ಅಂಡರ್-23 ಬಾಲಕರ ವಿಭಾಗದ 10000 ಮಿ. ಓಟದಲ್ಲಿ ಯಾದಗಿರಿಯ ವೈಭವಿ ಹಿಂದಿನ ದಾಖಲೆಯು 32:39.00 ಸೆಕೆಂಡುಗಳ ದಾಖಲೆ ಮುರಿದು 32:17.00ಗೆ ಗುರಿ ತಲುಪಿ ಹೊಸ ರಾಜ್ಯ ಮೀಟ್ ದಾಖಲಿಸಿದ್ದಾರೆ. ಅಂಡರ್-16 ವರ್ಷ ಪ್ರಾಯದೊಳಗಿನ ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ ಉಡುಪಿಯ ಅನುರಾಗ್ ಜಿ. 16.86 ಮೀ ದೂರದೊಂದಿಗೆ ಹೊಸ ರಾಜ್ಯ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಗಣೇಶ್ ಎಚ್.ನಾಯ್ಕ ಅವರು ಈ ಹಿಂದೆ 15.68 ಮೀ ದಾಖಲಿಸಿದ್ದರು.

Scroll to Top