ಅಕ್ರಮ ಸಾಗಾಟದ ಮರಳು ವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 25. ನಗರದ ಕಣ್ಣೂರು ಬೆಂಝ್ ಶೋ ರೂಮ್‌ನ ಹಿಂಬದಿಯಲ್ಲಿರುವ ನೇತ್ರಾವತಿ ನದಿ ಕಿನಾರೆಯಿಂದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ವರದಿಯಾಗಿದೆ.

ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಮರಳು ಸಾಗಾಟಕ್ಕೆ ಬಳಸಿದ್ದ 5 ಟಿಪ್ಪರ್ ಲಾರಿಗಳು, ದೋಣಿ, ಮರಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 25.45 ಲ.ರೂ. ಮೌಲ್ಯ ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

error: Content is protected !!
Scroll to Top