ಅದಿತಿ ಪ್ರಭುದೇವಾ ನಟನೆಯ ‘ಅಲೆಕ್ಸಾ’ ನವೆಂಬರ್ ನಲ್ಲಿ ಬಿಡುಗಡೆಗೆ ಸಜ್ಜು

(ನ್ಯೂಸ್ ಕಡಬ) newskadaba.com ಸೆ. 25. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಟಿಸಿರುವ ‘ಅಲೆಕ್ಸಾ’ ಚಿತ್ರವು ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಜೀವ ನಿರ್ದೇಶನದ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಟೀಸರ್ ನೋಡಿದ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು, ನಟಿ ಅದಿತಿ ಪ್ರಭುದೇವ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಫಾರ್ಮಾಸುಟಿಕಲ್‌ ಮಾಫಿಯಾ ಬಗ್ಗೆ ಕಥಾಹಂದರವಿದ್ದು, ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ನಿರ್ದೇಶಕ ಜೀವ ಅವರು ಹೇಳಿದ್ದಾರೆ. ನಿಜ ಜೀವನದಲ್ಲಿ  ಪೊಲೀಸ್ ಅಧಿಕಾರಿಯಾಗುವ ನನ್ನ ಕನಸು ನನಸಾಗಲಿಲ್ಲ, ಆದರೆ. ನಿರ್ದೇಶಕರು ತನಿಖಾಧಿಕಾರಿಯ ಪಾತ್ರ ನೀಡಿದಾಗ ಬಹಳ ಸಂತೋಷವಾಗಿತ್ತು. ಬಹಳ ಉತ್ಸಾಹದಿಂದ ಒಪ್ಪಿಕೊಂಡೆ. ನನಗೂ ಆ್ಯಕ್ಷನ್‌ ಹೀರೋಯಿನ್‌ ಆಗಬೇಕೆಂಬ ಕನಸಿತ್ತು, ಅದು ಕೂಡ ಈ ಚಿತ್ರದ ಮೂಲಕ ನನಸಾಗಿದೆ ಎಂದು ನಟಿ ಅದಿತಿ ಪ್ರಭುದೇವಾ ಹೇಳಿದ್ದಾರೆ.

Also Read  ನಟ ಕಿಚ್ಚ ಸುದೀಪ್ ತಾಯಿ ವಿಧಿವಶ..!

error: Content is protected !!
Scroll to Top