ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 24. ವಿದ್ಯಾರ್ಥಿನಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೂರು ಕರ್ಮಲದಲ್ಲಿ ಭಾನುವಾರದಂದು ಮಧ್ಯಾಹ್ನ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಬನ್ನೂರು ಕರ್ಮಲ ಸನ್ನಿಧಿ ಲೇ ಔಟ್ ನಿವಾಸಿ ಕಿಶೋರ್ ಎಂಬವರ ಪುತ್ರಿ ಅಂತಿಮ ಬಿ.ಸಿ.ಎ ವಿದ್ಯಾರ್ಥಿನಿ ಕೀರ್ತಿಕಾ ಎಂದು ಗುರುತಿಸಲಾಗಿದೆ. ಕೀರ್ತಿಕಾ ಮನೆಯೊಳಗೆ ಸೀಲಿಂಗ್ ಫ್ಯಾನ್‌ ಗೆ ಬೆಡ್‌ಶೀಟ್ ಸುತ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

Also Read  ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ

error: Content is protected !!
Scroll to Top