ಏರ್ಪೋರ್ಟ್ ನಲ್ಲಿ 30 ಐಫೋನ್ ಹಾಗೂ 28 ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು



(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಅಬುಧಾಬಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಚೆನ್ನೈಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನಿಂದ 30 ಐಫೋನ್, 28 ಲ್ಯಾಪ್ ಟಾಪ್ ಮತ್ತು ಕ್ರೆಡಿಟ್ ಕಾರ್ಡ್ ನಲ್ಲಿ ಇರಿಸಲಾಗಿದ್ದ 55 ಗ್ರಾಂ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಕುರಿತು ಸೆ. 17ರಂದು ವರದಿಯಾಗಿದೆ.







ಆರೋಪಿಯ ವಿರುದ್ಧ ಕಸ್ಟಮ್ಸ್ ಆಕ್ಟ್, 1962 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಯಾಣಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಬ್ಯಾಗೇಜ್ ಬೆಲ್ಟ್ ನಿಂದ ಲಗೇಜ್ ನ್ನು ತಡೆದಿದ್ದಾರೆ. ಈ ವೇಳೆ ತಪಾಸಣೆ ನಡೆಸಲಾಗಿದ್ದು, ಚಿನ್ನಾಭರಣ, ಲ್ಯಾಪ್ ಟಾಪ್ ಹಾಗೂ ಐಫೋನ್ ಗಳು ಪತ್ತೆಯಾಗಿದೆ.






error: Content is protected !!
Scroll to Top