ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 22. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಪೊಲೀಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ಸಂಚಾರಿ ಠಾಣಾ ಸಿಬ್ಬಂದಿ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದ ಕಾರಣ ಸೆ. 17 ರಂದು ಬಂಟ್ವಾಳದ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ. 19 ರಂದು ಅವರನ್ನು ಜನರಲ್ ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಮಲಗಿದ್ದ ವೇಳೆ ಟೇಬಲ್‌ ಮೇಲೆ ಇರಿಸಲಾಗಿದ್ದ ಎರಡು ಮೊಬೈಲ್ ಫೋನ್ ಕಳವು ಮಾಡಲಾಗಿದೆ. ಮೊಬೈಲ್ ಕಳ್ಳತನ ಮಾಡಿದ ಯುವಕ ಆಸ್ಪತ್ರೆಗೆ ಬಂದು ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೋರ್ವರಲ್ಲಿ “ಒಮ್ಮೆ ಫೋನ್ ಕೊಡಿ. ಅರ್ಜೆಂಟಾಗಿ ಫೋನ್ ಮಾಡಲು ಇದೆ” ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋಗಿ ಮೊಬೈಲ್ ನೊಂದಿಗೆ ನಾಪತ್ತೆಯಾಗಿದ್ದ. ಅದೇ ವ್ಯಕ್ತಿ ಮತ್ತೆ ಪೊಲೀಸ್ ಸಿಬ್ಬಂದಿಯ ಫೋನ್ ಕಳ್ಳತನ ಮಾಡಿದ್ದು ಸಿ.ಸಿ.ಕ್ಯಾಮರಾದ ಮೂಲಕ ತಿಳಿದುಬಂದಿದೆ.

Also Read  ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

error: Content is protected !!
Scroll to Top