ಮುಟ್ಟಿನ ಸಮಯದಲ್ಲಿ ಓವರ್ ಬ್ಲೀಡಿಂಗ್ ಆಗುತ್ತಿದೆಯೇ..?- ಇಲ್ಲಿದೆ ಕೆಲವು ಪರಿಹಾರ

(ನ್ಯೂಸ್ ಕಡಬ) newskadaba.com ಸೆ. 22. ಪ್ರತಿಯೋರ್ವ ಹೆಣ್ಣು ಮಕ್ಕಳು ಪ್ರತೀ ತಿಂಗಳು ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಪರೂಪಕ್ಕೆ ಸಾವಿರದಲ್ಲಿ ಒಬ್ಬರಿಗೆ ಮುಟ್ಟಿನ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಹಲವರು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಾರೆ. ಹೊಟ್ಟೆ ನೋವು, ಬೆನ್ನು ನೋವು, ಸೊಂಟ ನೋವು, ಕಡಿಮೆ ಬ್ಲೀಡಿಂಗ್, ಹೆಚ್ಚು ಬ್ಲೀಡಿಂಗ್ ಹೀಗೆ ಹಲವು ರೀತಿಯ ಸಮಸ್ಯೆಗಳಿರುತ್ತದೆ. ಇಂದು ನಾವು ಮುಟ್ಟಿನ ದಿನದಲ್ಲಿ ಓವರ್ ಬ್ಲೀಡಿಂಗ್ ಆದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ತಿಳಿಯೋಣ.


ಹೆಚ್ಚು ರಕ್ತ ಸ್ರಾವ ಆಗುವುದನ್ನು ತಡೆಯಲು ನೀವು ಪ್ರತಿದಿನ ಮಜ್ಜಿಗೆ, ಮೊಸರು, ತುಪ್ಪ, ಎಳನೀರು, ಹಣ್ಣು, ತರಕಾರಿಗಳ ಸೇವನೆ ಮಾಡಬೇಕು. ಅದರಲ್ಲೂ ದೇಹಕ್ಕೆ ತಂಪು ನೀಡುವ ತರಕಾರಿ, ಹಣ್ಣನ್ನು ತಿನ್ನಬೇಕು. ಇದರಿಂದ ದೇಹದ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮತೋಲನದಲ್ಲಿರುತ್ತದೆ. ಆಗ ಬ್ಲೀಡಿಂಗ್‌ ಸರಿಯಾಗಿ ಆಗುತ್ತದೆ.

Also Read  ಬಣ್ಣಗಳ ಹಬ್ಬ ಹೋಳಿ ಆಚರಣೆ ► ಹೇಗೆ ಮುಂಜಾಗರೂಕತೆ ವಹಿಸಬೇಕು..?


ಖರ್ಜೂರ ಉಷ್ಣತೆ ಹೆಚ್ಚಿಸುವ ಪದಾರ್ಥ. ನೀವು ತುಪ್ಪದಲ್ಲಿ ಎರಡು ಖರ್ಜೂರವನ್ನು ನೆನೆಸಿಟ್ಟು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ನಿಮ್ಮ ಮುಟ್ಟಿನ ಸಮಸ್ಯೆ ಸರಿಹೋಗುತ್ತದೆ. ಆಲೋವೆರಾ ಜ್ಯೂಸ್ ಕುಡಿದರೂ ಉತ್ತಮ. ರಾತ್ರಿ ಮಲಗುವಾಗ ಒಂಗು ಗ್ಲಾಸ್ ಬಿಸಿ ಹಾಲಿಗೆ, ಚಿಟಿಕೆ ಅರಿಶಿನ ಮತ್ತು ಕೊಂಚ ಕಲ್ಲುಸಕ್ಕರೆ ಮಿಕ್ಸ್ ಮಾಡಿ ಕುಡಿಯಬೇಕು. ಇದು ಮುಟ್ಟಿನ ಸಮಸ್ಯೆ ಸೇರಿ ಹಲವು ರೋಗಗಳಿಗೆ ರಾಮಬಾಣವಾಗಿದೆ.

ಇವೆಲ್ಲದರ ಸೇವನೆಯ ಜೊತೆಗೆ ನೀವು ಪ್ರತಿದಿನ ವಾಕಿಂಗ್, ಯೋಗ ಮಾಡಬೇಕು. ಧ್ಯಾನ ಮಾಡಬೇಕು. ಯೋಗದಿಂದ ನಿಮ್ಮ ದೇಹದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಅದರಲ್ಲೂ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತಿಲ್ಲವೆಂದಲ್ಲಿ, ಅಥವಾ ಹೆಚ್ಚು ಬ್ಲೀಡಿಂಗ್, ಕಡಿಮೆ ಬ್ಲೀಡಿಂಗ್ ಆಗುತ್ತಿದೆ ಎಂದಾದಲ್ಲಿ, ನೀವು ಯೋಗ, ವಾಕಿಂಗ್ ಮಾಡಿದ್ದಲ್ಲಿ, ಇವೆಲ್ಲ ಸಮಸ್ಯೆ ಸರಿಹೋಗುತ್ತದೆ.

Also Read  ಕಡಬ: 40 ಕೆಜಿಯ ಆಡನ್ನು ನುಂಗಿದ ಹೆಬ್ಬಾವು ➤ ವೀಡಿಯೋ ವೈರಲ್

error: Content is protected !!
Scroll to Top