(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಫೆ.07. ನಾವು ಪ್ರತಿದಿನ ವಿವಿಧ ಕಂಪೆನಿಗಳ ಟೂತ್‌ಪೇಸ್ಟ್ ಗಳನ್ನು ಬಳಸುತ್ತೇವೆ. ಕೆಲವರು ಬೆಲೆ ನೋಡಿ ಟೂತ್‌ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ ಮಾಡ್ತಾರೆ. ಆದರ ಟೂತ್‌ಪೇಸ್ಟ್ ಮೇಲೆ ಹಾಕಿರುವ ಬಣ್ಣದ ಗೆರೆಯ ಬಗ್ಗೆ ಯಾರೂ ತಿಳಿಯುವ ಗೋಜಿಗೇ ಹೋಗುವುದಿಲ್ಲ.
ಒಂದೊಂದು ಬ್ರ್ಯಾಂಡ್ ಟೂತ್‌ಪೇಸ್ಟ್ ಗಳ ಮೇಲೆ ಒಂದೊಂದು ಬಣ್ಣದ ಗೆರೆ ಇರುತ್ತೆ. ಅವು ಅವುಗಳ ಬ್ರ್ಯಾಂಡ್ ನ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್‌ಪೇಸ್ಟ್ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲ ಕಂಪನಿಗಳು ಟೂತ್‌ಪೇಸ್ಟ್ ಗೆ ಏನೇನು ಪದಾರ್ಥ ಹಾಕಿದ್ದೇವೆ ಎಂಬುದನ್ನು ಹೇಳಲೇಬೇಕು. ಕಂಪನಿಗಳು ಬಣ್ಣದ ಗೆರೆ ಮೂಲಕ ಟೂತ್‌ಪೇಸ್ಟ್ ಗೆ ಏನೆಲ್ಲ ವಸ್ತು ಬಳಸಿದ್ದೇವೆ ಎಂಬುದನ್ನು ಹೇಳುತ್ತವೆ. ಪಟ್ಟಿಯಲ್ಲಿ ರಹಸ್ಯ ಅಡಗಿದ್ದು, ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳುವ ಅಗತ್ಯವಿದೆ.
ಟೂತ್ಪೇಸ್ಟ್ ಹಿಂದೆ ಕೊನೆಯಲ್ಲಿ ಕಪ್ಪು ಬಣ್ಣದ ಗೆರೆಯಿದ್ದರೆ ಆ ಟೂತ್‌ಪೇಸ್ಟ್ ನ್ನು ಅಪ್ಪಿ ತಪ್ಪಿಯೂ ಬಳಸಬೇಡಿ. ಅತಿ ಹೆಚ್ಚು ಕೆಮಿಕಲ್ ಬಳಸುವ ಕಂಪನಿಗಳು ತಮ್ಮ ಕಂಪನಿ ಟೂತ್ಪೇಸ್ಟ್ ಮೇಲೆ ಕಪ್ಪು ಗೆರೆ ಎಳೆದಿರುತ್ತವೆ. ಕೆಂಪು ಬಣ್ಣದ ಗೆರೆಯಿದ್ದರೆ ಅದರಲ್ಲೂ ರಾಸಾಯನಿಕ ಬಳಸಲಾಗಿದೆ ಎಂದೇ ಅರ್ಥ. ಆದರೆ ಕಪ್ಪು ಬಣ್ಣದ ಗೆರೆಯುಳ್ಳ ಟೂತ್‌ಪೇಸ್ಟ್ ಗಿಂತ ಇದು ಉತ್ತಮ. ಇದ್ರಲ್ಲಿ ರಾಸಾಯನಿಕ ವಸ್ತು ಜೊತೆ ನೈಸರ್ಗಿಕ ವಸ್ತುಗಳನ್ನು ಸೇರಿಸಲಾಗಿರುತ್ತದೆ.
ನೀಲಿ ಬಣ್ಣದ ಗೆರೆಯಿರುವ ಟೂತ್‌ಪೇಸ್ಟ್ ಬಳಕೆಗೆ ಒಳ್ಳೆಯದು. ಇದರಲ್ಲಿ ನೈಸರ್ಗಿಕ ವಸ್ತುಗಳ ಜೊತೆಗೆ ಔಷಧೀಯ ತತ್ವಗಳಿರುತ್ತವೆ. ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಹಾಗೂ ಹೊಳೆಯುವಂತೆ ಮಾಡುವ ಜೊತೆಗೆ ಬೇರೆ ಬೇರೆ ರೋಗಗಳನ್ನು ದೂರ ಮಾಡುತ್ತದೆ. ಹಸಿರು ಬಣ್ಣದ ಗೆರೆಯಿರುವ ಟೂತ್‌ಪೇಸ್ಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ನೈಸರ್ಗಿಕ ಅಂಶದ ಜೊತೆ ಗಿಡಮೂಲಿಕೆಯನ್ನು ಬಳಸಲಾಗಿರುತ್ತದೆ. ಇನ್ಮುಂದೆ ಯಾವ ಬಣ್ಣದ ಗೆರೆಯ ಟೂತ್‌ಪೇಸ್ಟ್ ಗಳನ್ನು ಬಳಸಬೇಕೋ ನಿಮ್ಮ ವಿವೇಚನೆಗೆ ಬಿಟ್ಟದ್ದು.