ನೀವು ತೂಕ ಇಳಿಸಿಕೊಳ್ಳಲು ಚಿಂತಿಸುತ್ತಿದ್ದೀರಾ..? – ಹಾಗಾದರೆ ಅನ್ನ’ದಿಂದ ದೂರವಿರಿ

(ನ್ಯೂಸ್ ಕಡಬ) newskadaba.com ಸೆ. 17. ರಾತ್ರಿಯಲ್ಲಿ ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ, ಭಾರತೀಯ ಸಂಸ್ಕೃತಿಯ ಪಾಕಪದ್ಧತಿಯಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನಾವಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅನ್ನ ತಿನ್ನುವುದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ. ಹಾಗಾದರೆ ರಾತ್ರಿ ಅನ್ನವನ್ನು ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ರಾತ್ರಿ ಅನ್ನ ತಿನ್ನುವುದರಿಂದ ಪ್ರಯೋಜನಗಳು:- ರಾತ್ರಿಯಲ್ಲಿ ಅನ್ನ ಸೇವಿಸುವುದರಿಂದ, ಜೀರ್ಣಕ್ರಿಯೆ ಆರೋಗ್ಯಕರವಾಗುವುದು ಮಾತ್ರವಲ್ಲದೇ, ಹೊಟ್ಟೆಗೆ ಸಂಬಂಧಿಸಿದ ಆನೇಕ ಸಮಸ್ಯೆಗಳಿಂದ ದೂರವಿರಬಹುದು. ಅಕ್ಕಿಯೊಳಗೆ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿದ್ದು, ರಾತ್ರಿ ಅನ್ನ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ. ಹಾಗಾಗಿ ಅನ್ನದ ಬಳಕೆಯಿಂದ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.

Also Read  ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಅನಾನುಕೂಲಗಳು:- ರಾತ್ರಿಯಲ್ಲಿ ಅನ್ನ ಸೇವಿಸಿದರೆ, ಮಧುಮೇಹ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ರಾತ್ರಿ ಅನ್ನ ತಿನ್ನುವುದರಿಂದ ಸೈನಸ್ ಮತ್ತು ಅಸ್ತಮಾ ಸಮಸ್ಯೆಯೂ ಹೆಚ್ಚಾಗಬಹುದು. ಉಸಿರಾಟದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಗಂಟಲು ನೋವು ಉಲ್ಬಣಗೊಳ್ಳುತ್ತದೆ. ಶೀತದ ಸಮಸ್ಯೆ ಇರುವವರು ಅಥವಾ ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಅನ್ನವನ್ನು ಸೇವಿಸಬಾರದು. (ತಜ್ಞರ ಅಭಿಪ್ರಾಯ ಉತ್ತಮ)

error: Content is protected !!
Scroll to Top