ನಾಗರಹಾವಿಗೆ ಡೀಸೆಲ್ ಎರಚಿದ್ದ ಕಾರ್ಮಿಕ ಅಸ್ವಸ್ಥ – ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಮುಲ್ಕಿ, ಸೆ. 16. ನಾಗರಹಾವಿಗೆ ಡೀಸೆಲ್‌ ಎರಚಿದ ವ್ಯಕ್ತಿಯೋರ್ವ ಅಸ್ವಸ್ಥಗೊಂಡು ತಾನೂ ಆಸ್ಪತ್ರೆಗೆ ದಾಖಲಾದ ಘಟನೆ ಮುಲ್ಕಿಯ ಕಿನ್ನಿಗೋಳಿಯಲ್ಲಿ ನಡೆದಿದೆ.

ಕಳೆದವಾರ ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ನಾಗರಹಾವೊಂದು ಕಂಡುಬಂದಿದ್ದು, ಇದನ್ನು ಕಂಡ ಕಟ್ಟಡದ ಕಾವಲುಗಾರ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ನಾಗರ ಹಾವಿಗೆ ಡೀಸೆಲ್‌ ಎರಚಿದ್ದ. ಉರಿಯಿಂದ ನಾಗರ ಹಾವು ಒದ್ದಾಡಿತ್ತು. ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್‌ ಕಟೀಲು ಎಂಬವರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಯತೀಶ್ ಹಾವನ್ನು ರಕ್ಷಣೆ ಮಾಡಿ ಶ್ಯಾಂಪ್‌ ಮೂಲಕ ಮೈ ತೊಳೆದು ಸಹಜ ಸ್ಥಿತಿಗೆ ತಂದು ಅನಂತರ ಕಾಡಿಗೆ ಬಿಟ್ಟಿದ್ದರು. ಒಂದು ವಾರದ ಬಳಿಕ ಡೀಸೆಲ್‌ ಎರಚಿದ ಕಾರ್ಮಿಕ ನಾಗರ ಹಾವಿನಂತೆ ಮೈ ಉರಿಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ.

Also Read  ನಟ ಚೇತನ್ ಅಹಿಂಸಾ ಗೆ 14 ದಿನಗಳ ನ್ಯಾಯಾಂಗ ಬಂಧನ

error: Content is protected !!
Scroll to Top