ನಿಲ್ಲಿಸಿದ್ದ ಲಾರಿ ಹಠಾತ್ ಚಲಿಸಿ ಬಸ್ ಗಾಗಿ ಕಾಯುತ್ತಿದ್ದವರಿಗೆ ಢಿಕ್ಕಿ- ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 16. ನಿಲ್ಲಿಸಿದ ಲಾರಿಯೊಂದು ಮುಂದಕ್ಕೆ ಚಲಿಸಿ ಕಾರಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ.

ಗಾಯಗೊಂಡವರನ್ನು ಹಾಜರಾ (20) ಹಾಗೂ ಖತೀಜಾತುಲ್ ಆಫಿಯಾ (18) ಎಂದು ಗುರುತಿಸಲಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ‌ ಮೆಲ್ಕಾರ್ ನಲ್ಲಿ ‌ಸರ್ವೀಸ್ ರಸ್ತೆಯಲ್ಲಿ ಚಾಲಕನೋರ್ವ ‌ಲಾರಿ ನಿಲ್ಲಿಸಿ ಅಂಗಡಿಗೆ ಹೋಗಿದ್ದ. ಆದರೆ ಹ್ಯಾಂಡ್ ಬ್ರೇಕ್ ‌ಹಾಕದ ಕಾರಣ ಲಾರಿ ಮುಂದಕ್ಕೆ ಚಲಿಸಿ, ಅಲ್ಲಿಯೇ ಇದ್ದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದು ಮತ್ತೆ ಮುಂದೆ ಸಾಗಿದ ಲಾರಿ ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ವಾಲಿ ನಿಂತಿದೆ. ಲಾರಿ ಢಿಕ್ಕಿಯಾದ ಹೊಡೆದ ಪರಿಣಾಮ ಅವರಿಬ್ಬರೂ ರಸ್ತೆ ಬದಿಯಲ್ಲಿರುವ ಸಣ್ಣ ಹೊಂಡಕ್ಕೆ ಬಿದ್ದಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top