(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಗೃಹರಕ್ಷಕ ದಳದಲ್ಲಿ ಖಾಲಿಯಿರುವ 100 ಗೃಹರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಜ್ಞಾನವುಳ್ಳ, ವಾಹನ ಚಾಲನೆ ತಿಳಿದಿರುವ ಹಾಗೂ ಪುರುಷ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಪಾಸಾಗಿರುವ ಹಾಗೂ 19 ವರ್ಷದಿಂದ 45 ವರ್ಷದ ಒಳಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು ಇಲ್ಲಿ ಅರ್ಜಿಯನ್ನು ಪಡೆಯಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0824-2220562 ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹರಕ್ಷಕ ದಳ ಉದ್ಯೋಗ- ಅರ್ಜಿ ಆಹ್ವಾನ
