ಅಬುಧಾಬಿಯಲ್ಲಿ ಖುಲಾಯಿಸಿತು ಕೇರಳದ ಯುವಕನ ಅದೃಷ್ಟ ► ​ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತೀಯ

(ನ್ಯೂಸ್ ಕಡಬ) newskadaba.com ಅಬುದಾಬಿ, ಫೆ.07. ಉದ್ಯೋಗ ನಿಮಿತ್ತ ಅಬುದಾಬಿಯಲ್ಲಿ ನೆಲೆಸಿದ್ದ ಕೇರಳದ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ‌.

ಕೋಟ್ಯಾಧಿಪತಿ ಅದೃಷ್ಟವಂತನನ್ನು ಕೇರಳದ ಕೃಷ್ಣನ್ ಕುಟ್ಟಿ ನಾಯರ್ ಎಂದು ಗುರುತಿಸಲಾಗಿದ್ದು, ಇವರು 500 ದಿರ್ಹಮ್ ಬೆಲೆಯ ರ್ಯಾಫಲ್ ಟಿಕೆಟನ್ನು ಗೆಳೆಯರ ಪಾಲುದಾರಿಕೆಯಲ್ಲಿ ಖರೀದಿಸಿದ್ದರು. ಇದೀಗ 10 ಮಿಲಿಯನ್ ದಿರ್ಹಮ್ (ಸುಮಾರು 17.68 ಕೋಟಿ ರೂ.) ಗೆಲ್ಲುವ ಮೂಲಕ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಇವರು ತಮಗೆ ಸಿಕ್ಕ ಬಹುಮಾನ ಮೊತ್ತವನ್ನು ತಮ್ಮ ಮೂವರು ಗೆಳೆಯರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

Also Read  ಕೇರಳದ ನರ್ಸ್‌ಗಳಿಂದ ಗಲ್ಫ್ ಬ್ಯಾಂಕ್‌ಗೆ 700 ಕೋಟಿ ರೂ. ವಂಚನೆ: ಎಫ್‌ಐಆರ್‌ ದಾಖಲು

error: Content is protected !!
Scroll to Top