ಶಾಲಾ ಬಸ್ ನ ಕಿಟಕಿಯಿಂದ ತಲೆ ಹೊರಹಾಕಿದ ವಿದ್ಯಾರ್ಥಿನಿ – ತಲೆ ಕಂಬಕ್ಕೆ ಬಡಿದು ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಬ್ರೆಝಿಲ್, ಆ. 23. ಬಾಲಕಿಯೊಬ್ಬಳು ಚಲಿಸುತ್ತಿದ್ದ ಶಾಲಾ ಬಸ್ ನ ಕಿಟಕಿಯ ಮೂಲಕ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ತಲೆ ಕಂಬಕ್ಕೆ ತಗುಲಿ ಬಾಲಕಿ ಮೃತಪಟ್ಟ ಘಟನೆ ಬ್ರೆಝಿಲ್ ನಲ್ಲಿ ನಡೆದಿದೆ.

ಆಗಸ್ಟ್ 16ರಂದು ಈ ಘಟನೆ ನಡೆದಿದೆ. ಬಾಲಕಿಯು ಬಸ್‌ ನ ಕಿಟಕಿಯಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಅದೇ ಸಮಯದಲ್ಲಿ ಬಸ್ ಹೊರಟಿದೆ. ಪಕ್ಕದಲ್ಲಿ ತುಂಬಾ ವಾಹನಗಳಿದ್ದ ಸಂದರ್ಭ ಡ್ರೈವರ್ ಬಸ್ ನ್ನು ಸ್ವಲ್ಪ ಎಡಬದಿಗೆ ತೆಗೆದುಕೊಂಡಿದ್ದಾರೆ. ಈ ವೇಳೆ ತಲೆ ಹೊರಹಾಕಿದ್ದರಿಂದ ಕಂಬಕ್ಕೆ ಬಾಲಕಿಯ ತಲೆ ಹೊಡೆದಿದ್ದು, ತಕ್ಷಣವೇ ಅಲ್ಲಿದ್ದವರು ಚಾಲಕನಿಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಚಾಲಕ ತಕ್ಷಣವೇ ಬಸ್ ಅನ್ನು ನಿಲ್ಲಿಸಿ,ಆಸ್ಪತ್ರೆಗೆ ಕರೆದೊಯ್ದರಾದರೂ, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

Scroll to Top