ದಕ್ಷಿಣ ಆಫ್ರಿಕಾದಿಂದಲೇ ಚಂದ್ರಯಾನ ವೀಕ್ಷಿಸಲಿರುವ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 23. ಚಂದ್ರಯಾನ ಕುರಿತು ಭಾರತೀಯರಲ್ಲಿ ಕುತೂಹಲ ಹೆಚ್ಚಿಸಿದ್ದು, ದೇವಾಲಯ ಮಸೀದಿ ಹಾಗೂ ಚರ್ಚ್ ಗಳಲ್ಲಿ ಈ ಚಂದ್ರಯಾನಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ನಡೆಯುತ್ತಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು 15ನೇ ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿಯಲಿರುವ ಚಂದ್ರಯಾನ-3 ನೌಕೆಯನ್ನು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ಟ್ರಾಕ್‌ ಕೇಂದ್ರದ ವಿಜ್ಞಾನಿಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದು, ನೌಕೆ ನಿಗದಿಯಂತೆ ಸುಗಮವಾಗಿ ಚಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಚಂದ್ರಯಾನ-3 ನೌಕೆಯನ್ನು ಪೀಣ್ಯದ ಇಸ್ಟ್ರಾಕ್‌ ಕೇಂದ್ರದ ಮಿಷನ್‌ ಆಪರೇಷನ್‌ ಕಾಂಪ್ಲೆಕ್ಸ್‌ನಿಂದ ನಿಗಾ ವಹಿಸಲಾಗುತ್ತಿದೆ.

Also Read  ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ

error: Content is protected !!
Scroll to Top