ಇನ್ನುಮುಂದೆ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಜಾರಿ- ಸರಕಾರದ ಆದೇಶ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಆ. 23. ಶಾಲಾ- ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಕವಿಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯ ನೀಡಲಾಗಿರುತ್ತದೆ. ಆದರೆ, ಇದೀಗ ಮಹಾರಾಷ್ಟ್ರ ಸರ್ಕಾರವು ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರದ ಉಲ್ಹಾಸ್‌ ನಗರದಲ್ಲಿರುವ ಶೈಕ್ಷಣಿಕ ಸಂಘವೊಂದು ಲೈಂಗಿಕ ಶಿಕ್ಷಣವನ್ನು ಸೇರಿಸುವಲ್ಲಿ ಮೊದಲಿಗರಾಗಿದೆ. ಈ ಪಠ್ಯಕ್ರಮ ಸೇರ್ಪಡೆಗೆ ಕಾರಣ ಕಳೆದ ವಾರ ಬಿಡುಗಡೆಯಾದ ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅಭಿನಯದ ‘OMG 2’ ಸಿನೆಮಾ. ಈ ಚಿತ್ರವು ಭಾರತದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವನ್ನು ಎತ್ತಿ ತೋರಿಸಿದೆ ಅಲ್ಲದೇ, ಚಿತ್ರ ಬಿಡುಗಡೆಯಾದಾಗಿನಿಂದ, ಶಾಲಾ ಪಠ್ಯಕ್ರಮದಲ್ಲಿ ವಿಷಯವನ್ನು ಸೇರಿಸಲು ಕೆಲವು ಪ್ರಮುಖ ಧ್ವನಿಗಳು ಕೇಳಿಬರುತ್ತಿವೆ ಎನ್ನಲಾಗಿದೆ.

Also Read  ? ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ➤ ಶಾಲಾ ಪ್ರಾಂಶುಪಾಲನಿಗೆ ಮರಣದಂಡನೆ

error: Content is protected !!
Scroll to Top