ಮಂಗಳೂರು: ಮೆಸ್ಕಾಂ ನಲ್ಲಿ ಹಲವು ಉದ್ಯೋಗಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಮೆಸ್ಕಾಂ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 200 ಅಪ್ರೆಂಟೈಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.


ಸೆಪ್ಟೆಂಬರ್ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಹುದ್ದೆಯ ಮಾಹಿತಿ:
ಗ್ರಾಜುಯೇಟ್ ಅಪ್ರೆಂಟಿಸ್- 70
ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- 65
ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- 65

ವಿದ್ಯಾರ್ಹತೆ:
ಗ್ರಾಜುಯೇಟ್ ಅಪ್ರೆಂಟಿಸ್- ಬಿಇ/ಬಿ.ಟೆಕ್
ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- ಡಿಪ್ಲೊಮಾ
ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- ಬಿಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ

Also Read  ಪುತ್ತೂರು: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

ವೇತನ:
ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹ 9,000
ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- ಮಾಸಿಕ ₹ 8,000
ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹ 9,000

ಉದ್ಯೋಗದ ಸ್ಥಳ:
ಮಂಗಳೂರು

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಲು ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಇಂದಿನಿಂದ(19/08/2023) ಆರಂಭಗೊಂಡು ಸೆಪ್ಟೆಂಬರ್ 12, 2023ರಂದು ಕೊನೆಯ ದಿನವಾಗಿದೆ.

error: Content is protected !!