ಮನೆಯಲ್ಲೇ ಪತ್ರಕರ್ತನ ಗುಂಡಿಕ್ಕಿ ಹತ್ಯೆ – ನಾಲ್ವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಬಿಹಾರ, ಆ. 19. ಪತ್ರಕರ್ತನೋರ್ವನನ್ನು ಮನೆಯಲ್ಲೇ ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ.

ದೈನಿಕ್ ಜಾಗರಣ್ ಎಂಬ ಪತ್ರಿಕೆಯ ಪತ್ರಕರ್ತರಾಗಿದ್ದ ವಿಮಲ್ ಯಾದವ್ ಎಂಬವರನ್ನು ನಾಲ್ವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಅವರ ಎದೆಗೆ ಗುಂಡಿಕ್ಕಿ ಶುಕ್ರವಾರದಂದು ಹತ್ಯಗೈದಿದ್ದರು.


ಈ ಕುರಿತು ಮಾತನಾಡಿದ ಹಿರಿಯ ಫಿಲೊಸ್ ಅಧಿಕಾರಿ ವಿಮಲ್ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಂಟು ಮಂದಿ ಕೊಲೆ ಆರೋಪಿಗಳನ್ನು ಉಲ್ಲೇಖಿಸಲಾಗಿದ್ದು, ಈ ಪೈಕಿ ನಾಲ್ವರನ್ನು ಇಂದು ಮುಂಜಾನೆ ವಿಚಾರಣೆಗೊಳಪಡಿಸಲಾಗಿದೆ. ಆರೋಪಿಗಳು 2019 ರಲ್ಲಿ ವಿಮಲ್ ಯಾದವ್ ಅವರ ಸಹೋದರನನ್ನು ಸಹ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿ ವಿಮಲ್ ಏಕೈಕ ಸಾಕ್ಷಿಯಾಗಿದ್ದರು ಮತ್ತು ಅವರ ಸಾಕ್ಷ್ಯವನ್ನು ನಾಶಪಡಿಸಲು ಈ ಹತ್ಯೆ ನಡೆಸಿದರೇ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.

Also Read  ಐಎಎಸ್ ಪಾಸಾದ ಕೇರಳದ ಪ್ರಪ್ರಥಮ ಆದಿವಾಸಿ ಯುವತಿಯಿಂದ ಅಧಿಕಾರ ಸ್ವೀಕಾರ

error: Content is protected !!
Scroll to Top