ಮರ್ಧಾಳ: ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದ ಕಾರು ➤ ರಬ್ಬರ್ ಶೀಟ್ ಮಾಡುವ ಯಂತ್ರಕ್ಕೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಮಾ.29. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವದಿಯ ತೋಟಲ್ಕೆ ಉರುಳಿ ಬಿದ್ದ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳದಲ್ಲಿ ನಡೆದಿದೆ.

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಇಟಿಯೋಸ್ ಕಾರು ಮರ್ಧಾಳ ಸಮೀಪದ ಚಾಕಟೆಕೆರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದಲ್ಲಿದ್ದ ರಬ್ಬರ್ ಶೀಟ್ ಮಾಡುವ ಶೆಡ್ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ರಬ್ಬರ್ ಶೀಟ್ ಮಾಡುವ ಯಂತ್ರಕ್ಕೆ ಹಾನಿಯಾಗಿದೆ.

 

 

 

Scroll to Top