ಮೌಖಿಕ ಪರೀಕ್ಷೆಯಲ್ಲಿ ಫೇಲ್…! – SSLC ವಿದ್ಯಾರ್ಥಿನಿ ಆತ್ಯಹತ್ಯೆ

(ನ್ಯೂಸ್ ಕಡಬ)newskadaba.com ಬೆಳಗಾವಿ, ಆ.12. ಮೌಖಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಬೆಳಗಾವಿಯ ಟಿಳಕವಾಡಿಯ ರೈಲ್ವೆ ಗೇಟ್ ಬಳಿ ನಡೆದಿದೆ.

ಮೃತ ಬಾಲಕಿಯನ್ನು ಪ್ರೀತಿ ಅರುಣ್ ಕಾಂಬಳೆ (16) ಎಂದು ಗುರುತಿಸಲಾಗಿದೆ. ಮೌಖಿಕ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನೆಲೆಯಲ್ಲಿ ನೊಂದ ಬಾಲಕಿ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.

 

error: Content is protected !!