ಶ್ರೀಗಂಧ ಕದಿಯಲು ಬಂದ ಕಳ್ಳರ ಯತ್ನ ವಿಫಲ – ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.12. ರಾಜಾಜಿನಗರ 1ನೇ ಎನ್ ಬ್ಲಾಕ್‌ ನಲ್ಲಿರುವ ಬಿಡಬ್ಲ್ಯೂ ಎಸ್‌ಎಸ್‌ಬಿ ಕ್ವಾರ್ಟರ್ಸ್‌ ನ ಆವರಣದಿಂದ ಬೆಲೆ ಬಾಳುವ ಶ್ರೀಗಂಧದ ಮರ ಕದಿಯಲು ಕೆಲವು ಕಳ್ಳರು ಮಾಡಿದ ಪ್ರಯತ್ನವನ್ನು ಬೀದಿ ನಾಯಿಗಳು ವಿಫಲಗೊಳಿಸಿವೆ.


ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದರಿಂದ ನಿವಾಸಿಗಳು ಎಚ್ಚೆತ್ತಿದ್ದಾರೆ. ಬೊಗಳುವ ಸದ್ದು ಕೇಳಿದ ನಿವಾಸಿಗಳು ಮರಗಳತ್ತ ತೆರಳಿ ಐವರಲ್ಲಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ BWSSB ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೂರು ದಾಖಲಿಸಿದ್ದಾರೆ. ಪೊಲೀಸರು ಕರ್ನಾಟಕ ಅರಣ್ಯ ಕಾಯ್ದೆಯಡಿ ಐಪಿಸಿಯ ಇತರ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಕೂಡ ಸಾರ್ವಜನಿಕರ ಮೇಲೆ ಮರದ ಹಲಗೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

Scroll to Top