ಹೊಸ ಪಠ್ಯಪುಸ್ತಕದ ಪಾಠದಲ್ಲಿ ಬ್ರಾಹ್ಮಣರ ಅವಹೇಳನ ವಿವಾದ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.12. ಕರ್ನಾಟಕ ಸರ್ಕಾರ ಇತ್ತೀಚೆಗೆ ಪಠ್ಯ ಪುಸ್ತಕಗಳನ್ನು ಈ ವರ್ಷದ ಮಟ್ಟಿಗೆ ತಾತ್ಕಾಲಿಕವಾಗಿ ಪರಿಷ್ಕರಿಸಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಸೇರಿಸಿದ್ದ ಕೆಲವು ಪಾಠಗಳನ್ನು ತೆಗೆದು ಅದರ ಬದಲು ಬೇರೆ ಪಾಠಗಳನ್ನು ಸೇರ್ಪಡೆ ಮಾಡಿದೆ. ಆದರೆ, ಇದೀಗ ಸೇರ್ಪಡೆಯಾದ ಪಾಠಗಳೂ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ ಎಂಬ ಆರೋಪ ಕೇಳಿ ಬಂದಿದೆ.

8ನೇ ತರಗತಿಯ ಕನ್ನಡ ದ್ವಿತೀಯ ಭಾಷೆಯ ಪಠ್ಯದಲ್ಲಿ ವಿಜಯಮಾಲಾ ರಂಗನಾಥ ಬರೆದ ‘ಬ್ಲಡ್‌ ಗ್ರೂಪ್‌’ ಎಂಬ ಪಾಠದಲ್ಲಿ ಜಾತಿ ವ್ಯವಸ್ಥೆಗೆ ಬ್ರಾಹ್ಮಣ ಸಮುದಾಯ ಕಾರಣ ಎಂಬರ್ಥದ ವಿವರಗಳನ್ನು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮೈಸೂರಿನ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಆಪ್ತ ಸಹಾಯಕ ಮಹೇಶ ಗೋಖಲೆ, ಪಠ್ಯದಲ್ಲಿ ಬ್ರಾಹ್ಮಣ ಸಮುದಾಯವನ್ನು ಅನಾವಶ್ಯಕವಾಗಿ ವ್ಯಂಗ್ಯ ಮಾಡಲಾಗಿದೆ. ಜಾತಿಯ ಹೆಸರು ಹಾಕಿ ಬರೆಯಲಾದ ಪಠ್ಯವನ್ನು ಶಾಲಾ ಮಕ್ಕಳಿಗೆ ಬೋಧಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ ಎನ್ನಲಾಗಿದೆ.

Also Read  ಸುಳ್ಯದ ಹಿರಿಯ ಪತ್ರಕರ್ತ ವಿಧಿವಶ

 

error: Content is protected !!
Scroll to Top